ಸೋಮವಾರಪೇಟೆ, ಸೆ.೨೩: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪ ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಶಾಸಕರ ಗಮನ ಸೆಳೆಯಲು ಗ್ರಾಮ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷ ಟಿ.ಕೆ. ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಗ್ರಾಮದಲ್ಲಿನ ರಸ್ತೆ ಸಮಸ್ಯೆ, ಶಿಥಿಲಗೊಂಡ ಸೇತುವೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯುವಂತೆ ನಿರ್ಧರಿಸಲಾಯಿತು.
ಇದೇ ಸಂದರ್ಭ ನಡ್ಲಕೊಪ್ಪ ಸಮಿತಿಯ ವತಿಯಿಂದ ಹಲವಾರು ವರ್ಷ ಸಿಆರ್ಪಿಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟೇಶ್ ಹೆಚ್.ಎ. ಮತ್ತು ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷ ಎಂ.ಕೆ. ಶೇಖರ್, ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಪ್ಪ ಹಾಗೂ ಶಾರದಾ ಅವರ ಪುತ್ರ ವಿಕಾಸ್ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಸಮಿತಿಯ ಕಾರ್ಯದರ್ಶಿ ವಿ.ವಿ. ಸೋಮಯ್ಯ, ಖಜಾಂಚಿ ಎಂ.ಕೆ. ಧರ್ಮಪ್ಪ ಹಾಗೂ ಗ್ರಾಮದ ಪ್ರಮುಖರಾದ ಟಿ.ಕೆ, ಸುಬ್ಬಯ್ಯ, ಎಂ.ಬಿ ರಾಜಪ್ಪ, ಹೆಜ್. ಎ. ಗಣೇಶ್, ಕುಮಾರಪ್ಪ, ಶಾಂತಪ್ಪ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.