ಸಂಪಾಜೆ, ಸೆ. ೨೪: ಸಂಪಾಜೆಯ ಶ್ರೀ ಪಂಚಲಿAಗೇಶ್ವರ ದೇವಸ್ಥಾನ ವಾರ್ಷಿಕ ಮಹಾಸಭೆ ದೇವಾಲಯದ ಸಭಾಭವನದಲ್ಲಿ ಜಯಕುಮಾರ್ ಚೆದ್ಕಾರ್ ಅಧ್ಯಕ್ಷತೆಯಲ್ಲಿ ಜರುಗಿತು.
ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಕೇಶವ ಚೌಟಾಜೆ ವಾಚಿಸಿದರು. ಅದನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಕೋಶಾಧಿಕಾರಿ ಕೆ.ಜಿ. ಗೋಪಾಲಕೃಷ್ಣ ಭಟ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.
ಮುಖ್ಯಸ್ಥರಾದ ಎಂ.ಬಿ. ಸದಾಶಿವ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶಂಸಿಸಿ, ದೇವಸ್ಥಾನದ ಅಭಿವೃದ್ಧಿ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ದೇವಸ್ಥಾನದ ಅಭಿವೃದ್ಧಿ ಬಗ್ಗೆ ಹಾಗೂ ಜೀರ್ಣೋದ್ಧಾರದ ಕೆಲಸ ಕಾರ್ಯಗಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ಭಾರತಿ ಚಂದ್ರಶೇಖರ್, ದೇವರಗುಂಡ ವಿಮಲ ರವಿ ಬಂಟೋಡಿ ಪ್ರಾರ್ಥಿಸಿ, ಕೌಶಲ್ ಸ್ವಾಗತಿಸಿ, ವಂದಿಸಿದರು.