ಗೋಣಿಕೊಪ್ಪ, ಸೆ. ೨೩: ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಬಹು ಸೇವಾ ಕೇಂದ್ರ ಸಮುಚ್ಚಾಯ ನಿರ್ಮಿಸುವ ನಿರ್ಣಯವನ್ನು ಒಮ್ಮತದಿಂದ ತೆಗೆದುಕೊಳ್ಳಲಾಯಿತು.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.

ಸಂಘವು ಖರೀದಿಸಿರುವ ಜಾಗದಲ್ಲಿ ಬಹು ಸೇವಾ ಕೇಂದ್ರ ಸಮುಚ್ಚಾಯ ನಿರ್ಮಿಸಲು ನಕ್ಷೆ, ಅಂದಾಜುಪಟ್ಟಿಯೊAದಿಗೆ ವಿವರಿಸಿ ಮಂಜೂರಾತಿ ಪಡೆದುಕೊಳ್ಳಲಾಯಿತು.

ಸಂಘವು ೧೨೨೭ ಸದಸ್ಯರನ್ನು ಒಳಗೊಂಡಿದ್ದು, ರೂ. ೧.೫೫ ಕೋಟಿ ಷೇರು ಬಂಡವಾಳ ಹೊಂದಿದೆ. ರೂ. ೨.೦೫ ಕೋಟಿ ಕ್ಷೇಮನಿಧಿ, ರೂ. ೧೩.೩೮ ಕೋಟಿ ಠೇವಣಿ ಸಂಗ್ರಹಿಸಿ, ರೂ. ೬.೮೫ ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು. ರೂ. ೨೫.೫೦ ಕೋಟಿ ದುಡಿಯುವ ಬಂಡವಾಳದಿAದ ರೂ. ೧೦೨.೫ ಕೋಟಿ ವಾರ್ಷಿಕ ವ್ಯವಹಾರದೊಂದಿಗೆ ರೂ. ೧೮.೫ ಲಕ್ಷ ವ್ಯಾಪಾರ ಲಾಭದೊಂದಿಗೆ ಒಟ್ಟು ರೂ. ೩೨.೭೫ ಲಕ್ಷ ನಿವ್ವಳ ಲಾಭ ಪಡೆದು, ಇದರಂತೆ ಶೇ. ೧೩ ರಷ್ಟು ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಪ್ರಗತಿ ಬಗ್ಗೆ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಭಾರತೀಯ ಸೇನೆಯಲ್ಲಿ ಲೆಫ್ಟೆನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಸದಸ್ಯ ಬಾನಂಡ ಮಹೇಶ್‌ಗೆ ಶುಭ ಕೋರಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಜಾಹ್ನವಿ ನಂಜಪ್ಪ, ವಿ.ಎಸ್. ಮಾನ್ಯ, ಟಿ.ಕೆ. ನಿರಂಜನ್, ಎಸ್. ಧನುಷ್, ಪಿಯುಸಿ ವಿಭಾಗದಲ್ಲಿ ಟಿ.ಕೆ. ನೇತ್ರಾವತಿ, ವಿ.ಎಸ್. ಫಾತಿಮ ಶಮ್ನಾ, ಕೆ.ಕೆ. ಗಗನ್ ತಿಮ್ಮಯ್ಯ, ಬಿ.ವಿ. ರಚನಾ, ಎಂ.ಎಸ್. ಜಯಂತಿ ಅವರುಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಉಪಾಧ್ಯಕ್ಷ ಪಾಲೇಂಗಡ ನಂಜಪ್ಪ, ನಿರ್ದೇಶಕ ಚೆಕ್ಕೇರ ಅಚ್ಚಯ್ಯ, ಬೊಳ್ತಂಡ ಚಂಗಪ್ಪ, ಮನೆಯಪಂಡ ಮಹೇಶ್, ಎಸ್. ವಿ. ಚಂದ್ರಶೇಖರ್, ಜಿ. ಜೆ. ವಿನಯಕುಮಾರ್, ಎಚ್. ಬಿ. ಗಣೇಶ್, ಎಚ್ ಎಸ್. ಗೋವಿಂದ, ಮನೆಯಪಂಡ ಪ್ರತಿಕಾ ಮೊಣ್ಣಪ್ಪ, ಎಂ.ಎ. ಮಂಜುಳ, ಯು. ಎಂ. ಸವಿತಾ, ಸಿಇಒ (ಪ್ರಬಾರ) ಚಂದ್ರಕಲಾ, ಕೆಡಿಸಿಸಿ ಮೇಲ್ವಿಚಾರಕಿ ಸಿ. ಬಿ. ಪ್ರಿಯಾ ಇದ್ದರು.