*ಗೋಣಿಕೊಪ್ಪ, ಸೆ. ೨೪: ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲೆಯಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ನಡೆಯಿತು.
ಸರಕಾರಿ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿ ಗಳು ಕ್ಲೇ ಮೋಡಲಿಂಗ್, ಛದ್ಮವೇಶ, ಭಕ್ತಿಗೀತೆ, ಜನಪದ ನೃತ್ಯ, ಚಿತ್ರಕಲೆ ಮುಂತಾದ ವಿಭಾಗದಲ್ಲಿ ಭಾಗವಹಿಸಿ ಗಮನ ಸೆಳೆದರು. ಸಂತ ಅಂಥೋಣಿ ಪ್ರೌಢ ಶಾಲೆಯ ಫಾದರ್ ಡೇವಿಡ್ ಸಗರಾಯಿ ರಾಜ್, ಸಿಸ್ಟರ್ ಫ್ಲೋಸ್ಸಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಸರಕಾರಿ ಎಸ್.ಸಿ.ಎಸ್.ಟಿ. ನೌಕರರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಟಿ.ಎಸ್. ಮಹೇಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎನ್. ನಿಂಗರಾಜು, ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಕಾರ್ಯದರ್ಶಿ ಡಿ. ಚಂದನ, ಶಿಕ್ಷಣ ಸಂಯೋಜಕಿ ಕೆ.ಆರ್. ವಿಶಾಲಾಕ್ಷಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್, ಶಿಕ್ಷಕ ಕೆ.ಬಿ. ಪುಷ್ಪ ಶ್ರೀಕೃಷ್ಣ, ಅನಿತಕುಮಾರಿ, ರೂಸಿ ರಜನಿ, ತನುಜಾ, ನಿವ್ಯ ಕಾವೇರಮ್ಮ, ಶಿಲ್ಪ, ವೀಣಾ, ಶ್ರೀಜಾ, ಸೌಮ್ಯ, ಪ್ರವೀಣ್ ಇದ್ದರು.