ಕೂಡಿಗೆ, ಸೆ. ೨೪: ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ಮುಖ್ಯ ನಾಲೆಯ ವ್ಯಾಪ್ತಿಗೆ ಒಳಪಡುವ ೧೮ ವಿತರಣಾ ಉಪ ಕಾಲುವೆಗಳ ದುರಸ್ತಿ ಮತ್ತು ಅದಕ್ಕೆ ಸಂಬAಧಿಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮದ ಮುಖೇನ ರಾಜ್ಯ ಸರಕಾರಕ್ಕೆ ರೂ. ೩೬ ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಾರಂಗಿ ಅಣೆಕಟ್ಟೆ ನಿರ್ಮಾಣವಾದ ಬಳಿಕ ಇದುವರೆಗೆ ಉಪ ಕಾಲುವೆಗಳ ಅಭಿವೃದ್ಧಿ, ದುರಸ್ತಿ ಆಗದ ಕಾರಣದಿಂದಾಗಿ ನಾಲೆಯ ನೀರು ಸಮರ್ಪಕವಾಗಿ ರೈತರ ಜಮೀನಿಗೆ ತಲುಪದ ಹಿನ್ನೆಲೆಯಲ್ಲಿ ಸಮೀಕ್ಷೆಯ ಆಧಾರದ ಮೇಲೆ ಉಪ ಕಾಲುವೆಗಳ ದುರಸ್ತಿಗೆ ಸಂಬAಧಿಸಿದAತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ ನೀರಾವರಿ ವತಿಯಿಂದ ರೂ. ೩೬ ಕೋಟಿ ವೆಚ್ಚದ ಕ್ರಿಯಾ ಯೋಜನೆಯ ಅನುಗುಣವಾಗಿ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅದರಂತೆ ರಾಜ್ಯ ತಾಂತ್ರಿಕ ಉಪಸಮಿತಿ ಸಭೆಯ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.