ಕಣಿವೆ, ಸೆ. ೨೩: ತಲಾ ತಲಾಂತರಗಳಿAದ ಅರಣ್ಯದೊಳಗೆ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಜೇನುಕುರುಬ ಹಾಗೂ ಕೊರಗ ಸಮುದಾಯದ ಗಿರಿಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವೊಂದು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿಲ್ಲ ಎಂದು ಆರೋಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವ ಸಂಬAಧ ಕೊಡಗು, ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಆದಿವಾಸಿ ಪ್ರಮುಖರ ಸಭೆ ಬಸವನಹಳ್ಳಿಯಲ್ಲಿ ನಡೆಯಿತು.

ಆದಿವಾಸಿಗಳ ಸಮುದಾಯದ ರಾಜ್ಯ ನಾಯಕ ಜೆ.ಟಿ. ರಾಜಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಜಿಲ್ಲೆಗಳ ೫೦ಕ್ಕೂ ಹೆಚ್ಚು ಆದಿವಾಸಿ ಪ್ರಮುಖರು ಪಾಲ್ಗೊಂಡಿದ್ದರು.

ಪ್ರಾಚೀನ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತಾ ಬದುಕು ನಡೆಸಿಕೊಂಡು ಬರುತ್ತಿರುವ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಪ್ರಾಚೀನ ಬುಡಕಟ್ಟು ಗುಂಪನ್ನು ಸರ್ಕಾರಗಳು ಅನೇಕ ದಶಕಗಳಿಂದಲೂ ಕಡೆಗಣಿಸುತ್ತಲೇ ಬಂದಿದೆ.

ಹುಲಿ ಸಂರಕ್ಷಣಾ ಯೋಜನೆ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಶೀಘ್ರ ದಲ್ಲಿಯೇ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

(ಮೊದಲ ಪುಟದಿಂದ) ಈ ಸಂದರ್ಭ ಮೂರು ಜಿಲ್ಲೆಗಳ ಆದಿವಾಸಿಗಳ ಸಭೆಯನ್ನು ಆಯೋಜಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಜೆ.ಟಿ. ಕಾಳಿಂಗ ಮಾತನಾಡಿ, ಅರಣ್ಯವನ್ನು ಸಂರಕ್ಷಣೆ ಮಾಡಿರುವ ಆದಿವಾಸಿ ಗಳನ್ನು ಯೋಜನೆಗಳ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಸರ್ಕಾರ ಮುಂದಾದರೆ ಬಹು ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ.

ಡ್ರೋನ್ ಕ್ಯಾಮೆರಾಗಳ ಮೂಲಕ ಅಡಿಕೆ, ಶುಂಠಿ ಹಾಗೂ ರಬ್ಬರ್ ತೋಟಗಳಿಗೆ ರಸಾಯನ ಸಿಂಪಡಿಸುವ ಮೂಲಕ ಪರಿಸರವನ್ನು ನಾಶ ಮಾಡುತ್ತಿರುವುದು ಈ ಪರಿಸರವಾದಿಗಳೆನಿಸಿಕೊಂಡವರಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಆದಿವಾಸಿಗಳ ಸಂಘದ ರಾಷ್ಟಿçÃಯ ಸಂಘಟನಾ ಸದಸ್ಯ ನಾಗಪುರದ ಜೆ.ಕೆ. ಪ್ರಕಾಶ್, ಮೈಸೂರು ಜಿಲ್ಲಾ ಆದಿವಾಸಿಗಳ ಸಂಘದ ಅಧ್ಯಕ್ಷ ಬಸವಣ್ಣಾ, ಹುಣಸೂರು ತಾಲೂಕು ಅಧ್ಯಕ್ಷ ಬಾಬು ನೇರಳ ಕುಪ್ಪೆ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಅಧ್ಯಕ್ಷ ಶಶಿಕಲಾ, ಉಡುಪಿ ಜಿಲ್ಲಾ ಮುಖಂಡ ಸುಂದರ್, ನಾಗರಹೊಳೆಯ ಜೆ.ಕೆ. ತಿಮ್ಮ, ಜೇನು ಕುರುಬರ ಅಭಿವೃದ್ದಿ ಸಂಘದ ಅಧ್ಯಕ್ಷ ಸೋಮಯ್ಯ, ತಿತಿಮತಿಯ ಪುಷ್ಪ, ರವಿ, ಮತ್ತಿತರರು ಸಭೆಯಲ್ಲಿ ಹಾಜರಿದ್ದರು.