ವೀರಾಜಪೇಟೆ, ಸೆ. ೨೪: ವೀರಾಜಪೇಟೆ ಹೊರವಲಯದ ಚಿಟ್ಟಡೆ ಜುಮ್ಮಾ ಮಸೀದಿಯ ವತಿಯಿಂದ ಮಿಲಾದ್ ಸಂದೇಶ ಜಾಥಾ ನಡೆಯಿತು.
ಮಸೀದಿಯ ಆಡಳಿತ ಮಂಡಳಿ ವತಿಯಿಂದ ಬೇಟೋಳಿ ಗ್ರಾಮದ ಚಿಟ್ಟಡೆಯಿಂದ ಗುಂಡಿಗೆ ತನಕ ಮೆರವಣಿಗೆ ನಡೆಯಿತು.
ಮದ್ರಸದ ಶಿಕ್ಷಕರು, ವಿದ್ಯಾರ್ಥಿಗಳು, ಪುಟ್ಟ ಮಕ್ಕಳು, ಮದ್ರಸದ ದಫ್ ತಂಡಗಳು, ವಿವಿಧ ರೀತಿಯ ನರ್ತನ ಮಾಡುತ್ತ ಮೆರವಣಿಗೆಗೆ ರಂಗು ತಂದರು.
ಕೊಟ್ಟೋಳಿ ಜಂಕ್ಷನ್ ಬಳಿ ದಫ್ ಪ್ರದರ್ಶನ ನೀಡಿದ ನಂತರ ಅಲ್ಲಿರುವ ಅಕ್ಕ ಪಕ್ಕದ ನಿವಾಸಿಗಳು ಮೆರವಣಿಗೆಯಲ್ಲಿ ಆಗಮಿಸಿದವರಿಗೆ ಸಿಹಿ ತಿಂಡಿ ಹಾಗೂ ಪಾನೀಯ ವ್ಯವಸ್ಥೆ ಮಾಡಿದರು. ನಂತರ ಗುಂಡಿಗೆರೆಯ ಮಸೀದಿವರೆಗೆ ನಂತರ ಮರಳಿ ಚಿಟ್ಟಡೆಯ ಮಸೀದಿ ಆವರಣದಲ್ಲಿ ಮಕ್ಕಳ ವಿವಿಧ ರೀತಿಯ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು.
ಜುಮ್ಮಾ ಮಸೀದಿಯ ಅಧ್ಯಕ್ಷ ಫಕ್ರುದ್ದಿನ್ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ೧೪೯೯ ಜನ್ಮ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇದು ಶಾಂತಿ ಸಂದೇಶ ಸಾರುವ ಮೆರವಣಿಗೆ ಎಂದರು.
ಈ ಸಂದರ್ಭ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.