ಗೋಣಿಕೊಪ್ಪಲು, ಸೆ. ೨೨: ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ೩ನೇ ಆವೃತ್ತಿಯ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸುಂದರ ಪರಿಸರದ ನಡುವೆ ಆಗಷ್ಟೇ ಸೂರ್ಯನ ಕಿರಣ ಭೂಮಿಗೆ ತಾಗುತ್ತಿದ್ದಂತೆಯೇ ಬೆಳಗಿನ ೬ ಗಂಟೆಗೆ ಮ್ಯಾರಥಾನ್ ಓಟವು ಆರಂಭವಾಯಿತು. ಬೆಳಗಿನ ಜಾವದಲ್ಲಿಯೇ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಹಾಗೂ ವಯಸ್ಕರು ಟರ್ಫ್ ಮೈದಾನದಲ್ಲಿ ನೆರೆದಿದ್ದರು.

ಈ ಬಾರಿ ಮೂರನೆಯ ಆವೃತ್ತಿ ನಡೆಯುತ್ತಿದ್ದು, ದೇಶದ ವಿವಿಧ ಭಾಗದಿಂದ ಸ್ಪರ್ಧಿಗಳು ನಿರೀಕ್ಷೆಗೂ ಮೀರಿ ಆಗಮಿಸಿದ್ದರು. ಸಂಭ್ರಮ - ಸಡಗರದ ನಡುವೆ ಸ್ಪರ್ಧೆ ನಡೆದಿದ್ದು ಜನಾಕರ್ಷಣೆ ಪಡೆಯಿತು. ಬೆಳಿಗ್ಗೆ ೬ ಗಂಟೆಗೆ ಸರಿಯಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಏರ್ಪಡಿಸಿದ್ದ ೧೦ ಕಿ.ಮೀ ಮ್ಯಾರಥಾನ್‌ಗೆ ಸಂಸ್ಥೆಯ ಮಾಜಿ ಚಾಂಪಿಯನ್, ಟ್ರಸ್ಟಿ ಅಶ್ವಿನಿ ನಾಚಪ್ಪ, ದತ್ತ ಕರುಂಬಯ್ಯ ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಿದರು.

ಚುಮುಚುಮು ಚಳಿಯ ನಡುವೆ ಸುಂದರವಾದ ಕ್ಯಾಲ್ಸ್ನ ಅಥ್ಲೆಟಿಕ್ ಟರ್ಫ್ ಮೈದಾನದಲ್ಲಿ ಆರಂಭವಾದ ಮ್ಯಾರಥಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದು ನಂತರ ಸ್ಪರ್ಧಿಗಳು ಮೈದಾನಕ್ಕೆ ವಾಪಾಸು ಆಗಮಿಸಿದರು ೧೦ ಕಿ.ಮೀ. ಓಡಿದ ಸ್ಪರ್ಧಿಗಳು ಅತ್ಯಂತ ಸ್ಫೂರ್ತಿದಾಯಕವಾಗಿ ತಮ್ಮ ಓಟವನ್ನು ಪೂರ್ಣಗೊಳಿಸಿದ್ದರು. ಸ್ಪರ್ಧೆಯ ಮಾರ್ಗದುದ್ದಕ್ಕೂ ಪೋಲಿಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ರಸ್ತೆಯಲ್ಲಿ ಸಂಚರಿಸುವ ಯಾವುದೇ ವಾಹನಗಳಿಂದ ಸ್ಪರ್ಧಿಗಳಿಗೆ ಅಡಚಣೆ ಆಗದಂತೆ ಎಚ್ಚರ ವಹಿಸಿದ್ದರು.

ನಂತರ ಯುವಕ, ಯುವತಿ ಹಾಗೂ ಮಕ್ಕಳಿಗಾಗಿ ಮ್ಯಾರಥಾನ್ ೨ ನೇ ಹಾಗೂ ಮೂರನೆ ಸುತ್ತಿನಲ್ಲಿ ಸ್ಪರ್ಧೆಯನ್ನು ಆರಂಭಿಸಲಾಯಿತು.

ಕೊಡಗು ಸೇರಿದಂತೆ ಮೈಸೂರು, ಪಾಂಡಿಚೇರಿ, ಕಲ್ಕತ್ತಾ, ತಮಿಳುನಾಡು, ಕೇರಳ, ಬೆಂಗಳೂರು, ಮಂಗಳೂರು ಭಾಗದಿಂದ ಸ್ಪರ್ಧಿಗಳು ಆಗಮಿಸಿದ್ದು, ಗೋಣಿಕೊಪ್ಪಲುವಿನಲ್ಲಿ ಹಬ್ಬದ ವಾತಾವರಣ ಕಂಡುಬAದಿತು. ಕ್ಯಾಲ್ಸ್ ಆವರಣದಲ್ಲಿ ಸಾವಿರಾರು ಸ್ಪರ್ಧಿಗಳು ಸಮಾಗಮಗೊಂಡು ಕ್ರೀಡಾ ಕಲರವ ವಿಶೇಷ ಗಮನ ಸೆಳೆಯುತ್ತಿತ್ತು.

ಈ ವೇಳೆ ‘ಶಕ್ತಿ'ಯೊಂದಿಗೆ ಮಾತನಾಡಿದ ಅಂತರರಾಷ್ಟಿçÃಯ ಓಟಗಾರ್ತಿ, ಕ್ಯಾಲ್ಸ್ ಸಂಸ್ಥೆಯ ನಿರ್ದೇಶಕಿ, ಅಶ್ವಿನಿ ನಾಚಪ್ಪ, ಕಳೆದ ೨ ವರ್ಷಗಳಿಗಿಂತ ಈ ಬಾರಿ ಅಧಿಕ ಓಟಗಾರರು ಭಾಗವಹಿಸಿದ್ದು ನಿಜಕ್ಕೂ ಸಂತೋಷ ತಂದಿದೆ.

ಈ ದಿನಗಳಲ್ಲೂ ವಯಸ್ಸಿನ ಯಾವುದೇ ಭೇದಭಾವ ಇಲ್ಲದೆ ದೈಹಿಕ ಸಾಮರ್ಥ್ಯವನ್ನು ಎಲ್ಲರೂ ಕಾಪಾಡಿಕೊಳ್ಳುತ್ತಿರುವುದು ಮುಂದಿನ ಪೀಳಿಗೆಗೆ ಇದೊಂದು ಉದಾಹರಣೆಯಾಗಿದೆ. ಕ್ರೀಡೆಯ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ತವರೂರಿನಲ್ಲಿ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ಮೂರನೇ ಆವೃತ್ತಿ ಏರ್ಪಡಿಸಿದ್ದೇವೆ.

ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ದೇಶದ ವಿವಿಧ ಭಾಗದಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಉತ್ತಮ ವೇದಿಕೆ ನಿರ್ಮಾಣ ಮಾಡಿಕೊಡಲಾಗಿದೆ.

೩೦೦೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿರುವುದು ಹೆಮ್ಮೆ ಎನಿಸಿದೆ ಎಂದರು.

ವಯಸ್ಸಿನ ಮಿತಿಯನ್ನು ಮೀರಿ ಸ್ಪರ್ಧಿಗಳು ಅದರಲ್ಲೂ ಮಹಿಳೆಯರು ವಿಶೇಷ ಆಸಕ್ತಿಯಿಂದ ಭಾಗವಹಿಸಿರುವುದು ಅತ್ಯಂತ ಹೆಮ್ಮೆ ತಂದಿದೆ. ಹೊರರಾಜ್ಯದಿಂದ ಆಗಮಿಸಿದ ಸ್ಪರ್ಧಿಗಳಿಗೆ, ಕೊಡಗಿನ ಸಂಸ್ಕೃತಿಗಳನ್ನು ಪರಿಚಯಿಸುವ ಕೆಲಸವನ್ನು ಕೂಡ ಮಾಡಲಾಗಿದೆ ಎಂದರು.

ಈ ಸ್ಪರ್ಧೆಯನ್ನು ಅಂತರಾಷ್ಟಿçÃಯ ಮಾಜಿ ಹೆಪ್ಟಥ್ಲ್ಲಾನ್ ಸ್ಪರ್ಧಿ ಕೊಡಗಿನ ಮೂಲದವರಾದ ಅರ್ಜುನ ಪ್ರಶಸ್ತಿ ವಿಜೇತೆ ರೀತ್ ದೇವಯ್ಯ, ಅವರ ನಿರ್ದೇಶನದಂತೆ ಆಯೋಜಿಸಲಾಗಿತ್ತು.

ವಾಲಗ - ಕೊಡವ ನೃತ್ಯ

ಕಾರ್ಯಕ್ರಮದಲ್ಲಿ ಕೊಡಗಿನ ಸಾಂಪ್ರದಾಯಿಕ ವಾಲಗ, ವಿದ್ಯಾರ್ಥಿಗಳಿಂದ ಕೊಡವ ಸಾಂಪ್ರದಾಯಿಕ ಶೈಲಿಯ ನೃತ್ಯ ಪ್ರದರ್ಶನವಾದವು. ಹೊರಗಿನಿಂದ ಬಂದ ಸ್ಪರ್ಧಿಗಳು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಪರ್ಧೆಗೂ ಮುನ್ನಾ ಸ್ಪರ್ಧಾಳುಗಳಿಗೆ ವಿಶೇಷ ರೀತಿಯಲ್ಲಿ ನುರಿತ ಅನುಭವಿ ಶಿಕ್ಷಕರಿಂದ ವಾರ್ಮ್ ಅಪ್ ಮಾಡುವ ವ್ಯಾಯಾಮ ನೀಡಲಾಯಿತು. ಇದರಲ್ಲಿ ಬಹುತೇಕ ಸ್ಪರ್ಧಿಗಳು ಭಾಗವಹಿಸಿದ್ದರು.

ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಪಾರಿತೋಷಕ ನೀಡಲಾಯಿತು. ವಿವಿಧ ಹಂತದಲ್ಲಿ ಭಾಗವಹಿಸಿ, ಜಯಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

ಎನ್.ಇ.ಎನ್. ಸಂಸ್ಥೆ ಫೆಡರಲ್ ಬ್ಯಾಂಕ್, ಟಾಟಾ ಕಾಪಿ ಹಾಗೂ ಲೋಪಾಮುದ್ರಾ ಆಸ್ಪತ್ರೆ ಪ್ರಾಯೋಜಕರಾಗಿದ್ದರು.

ಅರ್ಜುನ ಪ್ರಶಸ್ತಿ ವಿಜೇತೆ ರೀತ್ ದೇವಯ್ಯ, ಟಾಟ ಕಾಫಿಯ ಸಂಪತ್, ಲೋಪಮುದ್ರಾ ಆಸ್ಪತ್ರೆಯ ಡಾ. ಅಮೃತ್ ನಾಣಯ್ಯ, ಕಾಪ್ಸ್ ಸಂಸ್ಥೆಯ ಚೇರ್ಮನ್ ದತ್ತ ಕರುಂಬಯ್ಯ, ಪ್ರಾಂಶುಪಾಲೆ ಗೌರಮ್ಮ, ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ವಿವಿಧ ಐಎಎಸ್, ಐಆರ್‌ಎಸ್ ನಿವೃತ್ತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ ಸ್ಪಧೆüðಗೂ ಭಾಗವಹಿಸಿ ಗಮನ ಸೆಳೆದರು.

ನುರಿತ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ತಿಳುವಳಿಕೆ ನೀಡಲಾಯಿತು.

ಭಾರತೀಯ ರೈಲ್ವೇಸ್ ಸೀನಿಯರ್ ಡಿವಿಜನಲ್ ಫೈನಾನ್ಸ್ ಮ್ಯಾನೇಜರ್ ಶ್ರೇಯಸ್ ಜಿ. ಹೊಸೂರು, ಭಾರತ ಕ್ರೀಡಾ ಇಲಾಖೆಯ ಮಾಜಿ ಕಾರ್ಯದರ್ಶಿ ಬಿ.ವಿ.ಪಿ. ರಾವ್, ಫೆಡರಲ್ ಬ್ಯಾಂಕ್‌ನ ಉಪಾಧ್ಯಕ್ಷ ಹಾಗೂ ವಿಭಾಗೀಯ ಮುಖ್ಯಸ್ಥ ರಾಜೀವ್ ವಿಸಿ, ಫೆಡರಲ್ ಬ್ಯಾಂಕ್‌ನ ಸಹಾಯಕ ಉಪಾಧ್ಯಕ್ಷೆ ಹಾಗೂ ವಿಭಾಗೀಯ ಮುಖ್ಯಸ್ಥೆ ಲಕ್ಷಿö್ಮಪ್ರಿಯ ಎಸ್.ಆರ್. ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

- ಹೆಚ್.ಕೆ. ಜಗದೀಶ್/ ದಿನೇಶ್.