ಸುಂಟಿಕೊಪ್ಪ: ಸಮೀಪದ ಕಡಗದಾಳು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಬಿ. ಪಡಾಯಿ ಬಿ. ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಫಲಾನುಭವಿಗÀಳಿಗೆ ಅಂಗವಾಡಿ ಕೇಂದ್ರದಲ್ಲಿ ನೀಡುವ ಶಾಲಾ ಪೂರ್ವ ಶಿಕ್ಷಣದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಜೈನ್ ಪೌಷ್ಟಿಕ ಆಹಾರದ ಮತ್ತು ಆರೋಗ್ಯ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪ್ರತಿಮಾ ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾದ ಚಮ್ಮಿ ಪ್ರಭು, ಕಡಗದಾಳು ಗ್ರಾಮದ ಪ್ರಶೂಷಕಿ ಅನಿತಾ, ಸ್ವಚ್ಛತಾ ಘಟಕದ ಸಾದಿಯ, ಭವ್ಯ, ಭವ್ಯ ಮಲ್ಲೇಶ್, ಆಶಾ ಕಾರ್ಯಕರ್ತೆ ಅನಿಲ, ಲೀಲಾವತಿ, ಅಂಗನವಾಡಿ ಸಹಾಯಕಿ ಹೇಮಲತಾ ಸಂಜೀವಿನಿ ಒಕ್ಕೂಟದ ಲೇಖಕಿ ದೇವಕ್ಕಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕÀ ಆಹಾರವಾದ ಚಕ್ಕೋತ, ಬಾಳೆಕಾಯಿ, ಸೀಬೆಕಾಯಿ, ಬೆಣ್ಣೆ ಹಣ್ಣು, ಬಾಳೆದಿಂಡು, ಮೂಸಂಬಿ, ಆಪಲ್, ವಿವಿಧ ಸೊಪ್ಪು-ತರಕಾರಿಗಳನ್ನು ಪ್ರದರ್ಶಿಸಲಾಯಿತು.ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿಶು ಅಭಿವೃದ್ಧಿ ಅಧಿಕಾರಿ ಶೀಲಾ ಮಾಹಿತಿ ನೀಡಿದರು. ಪ್ರಾಸ್ತಾವಿಕವಾಗಿ ಅರ್ಚನಾ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಸದಸ್ಯ ನವೀನ್ ಕುಮಾರ್, ಉದ್ಭವ ಟ್ರಸ್ಟ್ನ ಮಲ್ಲಿಕಾರ್ಜುನ್, ಆಶಾ ಕಾರ್ಯಕತೆಯರು, ಅಂಗನವಾಡಿ ಕಾರ್ಯಕತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಸತ್ಯವತಿ ಕುಂಬಾಡಿ ಸ್ವಾಗತಿಸಿ, ಪ್ರಮಿಳಾ ಕುಕ್ಕೆಟ್ಟಿ ವಂದಿಸಿ, ಕುಸುಮಾವತಿ ಕನ್ಯಾನ ನಿರೂಪಿಸಿದರು.ಕೂಡಿಗೆ: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪೌಷ್ಟಿಕ ಆಹಾರದ ಮಹತ್ವ ಹಾಗೂ ಆರೋಗ್ಯ ಜಾಗೃತಿಯ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ ಮಾಹಿತಿ ನೀಡಿದರು. ತಾಯಂದಿರು, ಮಕ್ಕಳು ಹಾಗೂ ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ನಾರಿನಾಂಶವುಳ್ಳ ಪೌಷ್ಟಿಕ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ.

ಹಸಿರು ಸೊಪ್ಪು, ಮೊಳಕೆ ಕಾಳು ಹಾಗೂ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹಾಗೆಯೇ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಬಿಸಿನೀರು ಸೇವಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛಂದ ಪರಿಸರವನ್ನು ಹೊಂದಬೇಕೆAದು ಕರೆ ಕೊಟ್ಟ ಡಾ. ದೀಪಿಕಾ ಅವರು, ಕುಟುಂಬ ಕಲ್ಯಾಣ ವಿಧಾನಗಳು ಹಾಗೂ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಇಲಿ ಜ್ವರಗಳ ಕುರಿತು ಎಚ್ಚರಿಕೆಯಿಂದ ಇರುವ ಮಾರ್ಗೋಪಾಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕರಾದ ವಿಶ್ವಜ್ಞ ಅಗತ್ಯ ಮಾಹಿತಿ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗಳಾದ ಚಂದ್ರೇಶ್, ಮುಖೇಶ್, ಶುಶ್ರೂಷಕಿ ಶಕೀನಾ, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಗೀತಾ ಹಾಗೂ ಗ್ರಾಮಸ್ಥರು ಇದ್ದರು.