ಮಡಿಕೇರಿ, ಸೆ. ೨೨: ಅಶೋಕಪುರದ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೦ನೇ ವರ್ಷದ ಗೌರಿ - ಗಣೇಶೋತ್ಸವ ಮೂರ್ತಿಗಳ ವಿಸರ್ಜನೋತ್ಸವ ತಾ. ೨೩ರಂದು (ಇಂದು) ನಡೆಯಲಿದೆ.
ಈ ಪ್ರಯುಕ್ತ ಮಧ್ಯಾಹ್ನ ೧ ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ನೆರವೇರಲಿದ್ದು, ರಾತ್ರಿ ೭ ಗಂಟೆಗೆ ಗಣಪತಿ ವಿಸರ್ಜನೋತ್ಸವ ಮೆರವಣಿಗೆ ನಡೆಯಲಿದೆ. ಈ ಬಾರಿ ಮಂಟಪದಲ್ಲಿ ಗಣಪತಿಯಿಂದ ಶತಮಹಿಶಿಯ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಲಿರುವುದಾಗಿ ಸಮಿತಿಯ ಪ್ರಕಟಣೆ ತಿಳಿಸಿದೆ.
ಮದ್ಯ ಮಾರಾಟ ನಿಷೇಧ
ಅಶೋಕಪುರದ ಗಣಪತಿ ವಿಸರ್ಜನೋತ್ಸವದ ಹಿನ್ನೆಲೆ ತಾ. ೨೩ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೧೨ ಗಂಟೆಯವರೆಗೆ ಮಡಿಕೇರಿ ನಗರ ಹಾಗೂ ಸುತ್ತಮುತ್ತ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.