ಐಗೂರು, ಸೆ. ೨೩: ೨೦೨೩-೨೪ನೇ ಸಾಲಿನಲ್ಲಿ ಐಗೂರು ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಸೇವೆ ನೀಡುವುದರೊಂದಿಗೆ ರೂ. ೯೧.೪೩ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇಕಡ ೨೦ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಬಿ. ಶಿವಕುಮಾರ್ ಅವರು ತಿಳಿಸಿದರು. ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಒಟ್ಟು ೧,೭೪೦ ಪೂರ್ಣ ಪಾಲು ಹೊಂದಿದ ಸದಸ್ಯರುಗಳಿದ್ದು ರೂ. ೨ ಕೋಟಿ ೨೮ ಲಕ್ಷದ ೩೬ ಸಾವಿರ ಪಾಲು ಬಂಡವಾಳವಿದೆ. ಒಟ್ಟು ರೂ. ೩೨ ಕೋಟಿ ೭೯ ಲಕ್ಷದ ೩೨ ಸಾವಿರ ಹಣವನ್ನು ವಿವಿಧ ರೀತಿಯ ಸಾಲಗಳಾಗಿ ನೀಡಿದ್ದು, ಈ ಪೈಕಿ ಸಂಘದ ಸ್ವಂತ ಬಂಡವಾಳದಿAದ ರೂ. ೧೪ ಕೋಟಿ ೬೩ ಲಕ್ಷದ ೮೭ ಸಾವಿರ ಹಣವನ್ನು ಸದಸ್ಯರಿಗೆ ವಿತರಿಸಲಾಗಿದೆ. ಸಂಘದಲ್ಲಿ ಉಳಿತಾಯ ಠೇವಣಿ, ನಿರಖು ಠೇವಣಿ, ಪಿಗ್ಮಿ ಠೇವಣಿ ಮತ್ತು ಸ್ವಸಹಾಯ ಗುಂಪಿನ ಉಳಿತಾಯ ಠೇವಣಿ ಒಟ್ಟು ಸೇರಿ ರೂ ೧೩ ಕೋಟಿ ೧೬ ಲಕ್ಷ ಠೇವಣಿಗಳು ಇದೆ. ಐಗೂರು ಮತ್ತು ಎಡವಾರೆ ನ್ಯಾಯಬೆಲೆ ಅಂಗಡಿಯಲ್ಲಿ ನಿಯಂತ್ರಿತ ಆಹಾರಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ, ಗೊಬ್ಬರ ವ್ಯಾಪಾರವನ್ನು ಹಾಗೂ ಕೋವಿತೋಟಗಳನ್ನು ಮಾರಾಟ ಮಾಡಲಾಗುತ್ತಿದೆ, ಸದಸ್ಯರು ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿ ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಥಮವಾಗಿ ಸಾಲ ಮರುಪಾವತಿಸಿದ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಸಭೆಯಲ್ಲಿ ಸಂಘದ ವಿಷಯಗಳ ಬಗ್ಗೆ ತಾಕೇರಿ ಪೊನ್ನಪ್ಪ, ಅರಸು ಎಸ್.ಎಮ್. ಚಂಗಪ್ಪ, ಚಂದ್ರ ಪಾಲ್, ಮೇಘನ್, ಪ್ರಶಾಂತ್, ಯಡವನಾಡು ರಮೇಶ ಮತ್ತು ಅಶೋಕ್ ಇವರುಗಳು ಕೇಳಿದ ಪ್ರಶ್ನೆಗೆ ಸಂಘದ ಅಧ್ಯಕ್ಷರಾದ ಹೆಚ್.ಬಿ .ಶಿವಕುಮಾರ್ ಮತ್ತು ಕಾರ್ಯನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜ್ ಅವರು ಉತ್ತರಗಳನ್ನು ನೀಡಿದರು. ಸಂಘದ ಕಟ್ಟಡವು ಅಪಾಯಕಾರಿ ಹೊಳೆಯ ಬದಿಯಲ್ಲಿರುವುದರಿಂದ ತಡೆಗೋಡೆ ನಿರ್ಮಿಸುವ ಸಲುವಾಗಿ ಸರಕಾರದ ಮೊರೆ ಹೋಗಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಪ್ರಾರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಡಿಕ್ಕಿ ರಾಜುರವರು ವರದಿ ವಾಚಿಸಿದರು. ಡಿ.ಎಸ್. ಚಂಗಪ್ಪನವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯವಾಯಿತು.

ಮಹಾಸಭೆಯಲ್ಲಿ ಅಧ್ಯಕ್ಷರಾದ ಎಚ್.ಬಿ. ಶಿವಕುಮಾರ್, ಉಪಾಧ್ಯಕ್ಷರಾದ ಡಿ.ಎಸ್. ಚಂಗಪ್ಪ, ನಿರ್ದೇಶಕರುಗಳಾದ ಡಿ.ಎಚ್. ವಿಶ್ವನಾಥ ರಾಜೇ ಅರಸ್, ಕೆ.ಪಿ. ರೋಷನ್, ಎಲ್.ಎಮ್. ರಾಜೇಶ್, ಸುನು ಕಿಶೋರ್, ಬಿ.ಕೆ. ದಾಕ್ಷಾಯಿಣಿ, ಕೆ.ಈ. ಕುಟ್ಟಪ್ಪ, ಎಸ್.ಬಿ. ಸಂತೋಷ್, ಎಸ್.ಪಿ. ಕೀರ್ತಿಪ್ರಸಾದ್ , ಕೆ.ಎಲ್. ಹೊನ್ನಪ್ಪ, ಬಸಪ್ಪ, ಎಸ್.ಕೆ. ಲಕ್ಷö್ಮಣ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಹಾಗೂ ಮೇಲ್ವಿಚಾರಕರಾದ ಕೆ.ಎಂ. ಶ್ರೀಜು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.