ಮಡಿಕೇರಿ, ಸೆ. ೨೨: ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ರಾತ್ರಿ ದಸರಾ ವೈಭವದ ಮೆರುಗು.., ನಗರದಾದ್ಯಂತ ಕಾಲಿಡಲಾಗದಷ್ಟು ಜನ ಜಂಗುಳಿ.., ಬಣ್ಣ ಬಣ್ಣದ ಬೆಳಕಿನ ನಡುವೆ ಅಬ್ಬರಿಸುತ್ತಿದ್ದ ಸಂಗೀತಕ್ಕೆ ಮೈಮರೆತು ಕುಣಿಯುತ್ತಿದ್ದ ಯುವ ಪಡೆ., ಈ ನಡುವೆ ಪೌರಾಣಿಕ ಕಥಾ ಹಂದರದೊAದಿಗೆ ಸುರಾಸುರರ ಕಾಳಗದ ದೃಶ್ಯ ದೇವಲೋಕವನ್ನೇ ಸೃಷ್ಟಿಸಿದಂತಿತ್ತು.
ಇದು ಕಂಡು ಬಂದಿದ್ದು ಶನಿವಾರ ರಾತ್ರಿ ಮಡಿಕೇರಿಯಲ್ಲಿ.., ಇಲ್ಲಿನ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸ ಲಾಗಿದ್ದ ಅಯೋಧ್ಯೆ ಶ್ರೀರಾಮ ಗಣಪತಿಯ ವಿಸರ್ಜನೋತ್ಸವ ವಿಜೃಂಭಣೆಯಿAದ ನಡೆಯಿತು. ಚಲನವಲನಗಳ ಕಲಾಕೃತಿಗಳ ನ್ನೊಳಗೊಂಡ ಅಲಂಕೃತ ಮಂಟಪ ದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ಮೂಲಕ ಕೊಂಡೊಯ್ದು ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕಿಕ್ಕಿರಿದ ಜನ
ವರ್ಷಂಪ್ರತಿ ಒಂದಿಲ್ಲೊAದು ವಿಶೇಷತೆಗಳೊಂದಿಗೆ ಹೆಸರು ವಾಸಿಯಾಗಿರುವ ಶಾಂತಿನಿಕೇತನ ಯುವಕ ಸಂಘದ ಈ ಬಾರಿಯ ಉತ್ಸವ ಮಂಟಪವನ್ನು ವೀಕ್ಷಿಸಲು ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು. ಡಿಪೋ ಬಳಿ, ಜಿಟಿ ವೃತ್ತ, ಹಳೆ ಖಾಸಗಿ ಬಸ್ ನಿಲ್ದಾಣ, ಚೌಕಿ, ಎವಿ ಶಾಲೆ ಬಳಿ ಪ್ರದರ್ಶನ ನೀಡುವ ವೇಳೆ ಜನ ಜಂಗುಳಿ ಉಂಟಾಗಿತ್ತು. ಸ್ಥಳೀಯರು ಸೇರಿದಂತೆ ಪ್ರವಾಸಿಗರು ಮಂಟಪದ ವೈಭವವನ್ನು ಕಣ್ತುಂಬಿ ಕೊಂಡರು. ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ (ಡ್ಯಾಂ) ಮೇಲೆ, ಕಟ್ಟಡದ ಮೇಲೇರಿ ಕುಳಿತು ಮಂಟಪದ ಸೊಬಗನ್ನು ಸವಿಯುತ್ತಿದ್ದ ದೃಶ್ಯ ಗೋಚರಿಸಿತು.
ಮಯೂರೇಶನಿಂದ ಸಿಂಧುರಾಜ ನನ್ನು ಸಂಹರಿಸುವ ಕಥಾ ಹಂದರ ವನ್ನು ಮಂಟಪದಲ್ಲಿ ಅಳವಡಿಸ ಲಾಗಿತ್ತು. ಈ ಸಂದರ್ಭ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾ ಗಿತ್ತು. ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಿದವು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಡಿಕೇರಿ ನಗರ ಹಾಗೂ ಸುತ್ತಮುತ್ತಲ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.