ಸುಂಟಿಕೊಪ್ಪ, ಸೆ. ೨೩: ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತ, ೨೦೨೩-೨೪ ಸಾಲಿನಲ್ಲಿ ರೂ. ೭೩ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಮಹಾಸಭೆಯಲ್ಲಿ ಹೇಳಿದರು.

ಸಂಘದ ವಾರ್ಷಿಕ ಮಹಾಸಭೆ ಕೃಷಿ ಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘ ಸ್ಥಾಪನೆಯಾಗಿ ೪೭ ವರ್ಷಗಳಾಗಿವೆ. ಸಂಘದಲ್ಲಿ ಪ್ರಸ್ತುತ ೨,೩೩೭ ರೈತ ಸದಸ್ಯರುಗಳಿದ್ದು, ರೂ. ೨೪೨.೫೬ ಲಕ್ಷ ಪಾಲು ಬಂಡವಾಳವಿದೆ ಎಂದು ತಿಳಿಸಿದರು.

ಸಂಘದಲ್ಲಿ ರೂ. ೧೩೧ ಲಕ್ಷ ಕ್ಷೇಮನಿಧಿಯನ್ನು ಇರಿಸಲಾಗಿದೆ. ರೂ. ೪೭.೦೪ ಲಕ್ಷ ಕಟ್ಟಡ ನಿಧಿ, ರೂ. ೬೯.೫೮ ಲಕ್ಷ ಇತರೆ ನಿಧಿಗಳು ಹಾಗೂ ರೂ. ೧೨೭.೭೧ ಲಕ್ಷ ಸವಕಳಿ ನಿಧಿ ಇದೆ ಎಂದು ಮಹಾಸಭೆಗೆ ತಿಳಿಸಿದರು.

ಸಂಘದಲ್ಲಿ ಒಟ್ಟು ಠೇವಣಿಗಳ ಮೊತ್ತ ರೂ. ೨,೯೦೧ ಲಕ್ಷ ಇದೆ. ಸಂಘವು ಕಿಸಾನ್ ಕ್ರೆಡಿಟ್ ಕಾರ್ಡು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ಸ್ವಸಹಾಯ ಗುಂಪು ಸಾಲ, ಗೃಹೋಪಯೋಗಿ ವಸ್ತು ಸಾಲ, ಗೃಹ ಸಾಲ, ಗೊಬ್ಬರ ಸಾಲ, ವಾಹನ ಸಾಲ, ಜಾಮೀನು ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ನಿರಖು ಠೇವಣಿ ಆಧಾರದ ಸಾಲ, ಆಭರಣ ಸಾಲ, ಪಿಗ್ಮಿ ಆಧಾರ ಸಾಲ, ಆಭರಣ ಸಾಲಗಳನ್ನು ನೀಡುತ್ತಿದೆ ಎಂದು ಹೇಳಿದರು. ಈ ಬಾರಿ ರೂ. ೭೩ ಲಕ್ಷ ಲಾಭ ಗಳಿಸಿದೆ.

ಸದಸ್ಯರು ಇಡುವ ಠೇವಣಿಗೆ ವಾರ್ಷಿಕ ಶೇ. ೭.೭೫ ಆಕರ್ಷಕ ಬಡ್ಡಿ ನೀಡುತ್ತಿದೇವೆ ಎಂದು ಮಹಾಸಭೆಗೆ ತಿಳಿಸಿದರು.

೨೦೨೩-೨೪ ನೇ ಸಾಲಿನಲ್ಲಿ ವಿತರಿಸಿದ ಸಾಲದಲ್ಲಿ ಶೇ. ೯೮.೫೮ರಷ್ಟು ವಸೂಲಾತಿ ಆಗಿದೆ ಎಂದು ತಿಳಿಸಿದರು

ಸಂಘದ ಕಾರ್ಯವ್ಯಾಪ್ತಿಗೆ ಒಳಪಟ್ಟ ೭ ಮತ್ತು ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಸಂಘದ ವತಿಯಿಂದ ೧೧೬ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಉತ್ತಮ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಿದ ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು. ವಾರ್ಷಿಕ ಆಯವ್ಯಯದ ಕುರಿತು ಸಭೆಯಲ್ಲಿ ಸಿ.ಎಲ್.ವಿಶ್ವ, ನಂಗಾರುಜಗ, ಶಾಂತಕುಮಾರ್, ಲೋಕನಾಥ್, ಚಂದ್ರಶೇಖರ್, ಭುವನ್ ಮುಂತಾದವರು ಚರ್ಚೆ ನಡೆಸಿದರು.

ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್.ಬಿ. ಅನಿತಾ, ನಿರ್ದೇಶಕರುಗಳಾದ ಡಿ.ಎಲ್, ಮಹೇಶ್‌ಚಂದ್ರ, ಬಿ.ಎಸ್. ಧನಪಾಲ, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ವಿ.ಎಸ್. ರಾಜಪ್ಪ, ಟಿ.ಕೆ. ಉದಯಕುಮಾರ್, ಎಸ್.ಎಸ್. ಕಾರ್ಯಪ್ಪ, ಕೆ.ಕೆ. ಲೀಲಾವತಿ, ಎನ್.ಪಿ. ಪಂಚಾಕ್ಷರಿ, ಆರ್. ಕೆ. ಚಂದ್ರ, ಹೆಚ್.ಜೆ. ಕೃಷ್ಣ, ಸಹಕಾರ ಸಂಘಗಳ ನೂಡಲ್ ಅಧಿಕಾರಿ ಅಜಿತ್ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾರ್ಯನಿರ್ವಾಣಾಧಿಕಾರಿ ಧನಂಜಯ ನಿರೂಪಿಸಿದರು, ದನಪಾಲ್ ಸ್ವಾಗತಿಸಿದರು, ಮನು ಮಹೇಶ್ ವಂದಿಸಿದರು.