*ಗೋಣಿಕೊಪ್ಪ, ಸೆ. ೨೨: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ೪೬ನೇ ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ಅ. ೮ ರಂದು ನಡೆಯುವ ಮಕ್ಕಳ ದಸರಾ ಪ್ರಯುಕ್ತ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳಿಗೆ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಛದ್ಮವೇಷÀ, ಜಾನಪದ ಗೀತೆ, ನೃತ್ಯ ಸ್ಪರ್ಧೆ ಹಾಗೂ ಮಣ್ಣಿನ ಮಾದರಿ ತಯಾರಿಕೆ ಸ್ಪರ್ಧೆಗಳು ಮತ್ತು ವಿವಿಧ ರೀತಿಯ ಆಟೋಟಗಳ ಸ್ಪರ್ಧೆಯನ್ನು ಮಕ್ಕಳ ದಸರಾ ಪ್ರಯುಕ್ತ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯:೩೦ ಗಂಟೆಗೆ ಕಾವೇರಿ ಕಲಾವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಛದ್ಮವೇಷÀ ಸ್ಪರ್ಧೆ ೧ ರಿಂದ ೩ ವರ್ಷದ ತನಕ, ೪ ರಿಂದ ೫ ವರ್ಷದೊಳಗೆ, ೬ ರಿಂದ ೯ ವರ್ಷದೊಳಗೆ, ೧೦ ರಿಂದ ೧೫ ವರ್ಷದೊಳಗಿನ ವಿಭಾಗದವರಿಗೆ ನಡೆಯಲಿದ್ದು, ಯಾವುದಾದರು ವೇಷವನ್ನು ಧರಿಸಬಹುದಾಗಿದೆ. ವಸ್ತಾçಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಛದ್ಮವೇಷ ನೋಂದಣಿಗೆ ಐ.ಎಂ. ರೋಜಿ ೯೯೦೦೩೪೯೧೯೪, ಪಿ.ಎ. ಅಲೀಮ ೯೭೪೧೬೬೪೧೭೩ ಅವರನ್ನು ಸಂಪರ್ಕಿಸಬಹುದಾಗಿದೆ.
ಜಾನಪದ ಗೀತೆ ಗಾಯನ ಸ್ಪರ್ಧೆಗೆ ಒಂದು ತಂಡದಲ್ಲಿ ೧೦ ರಿಂದ ೧೨ ಮಂದಿ ಕಡ್ಡಾಯವಾಗಿರಬೇಕು. ೫ ರಿಂದ ೬ ನಿಮಿಷ ಕಾಲಾವಕಾಶ ಇರಲಿದ್ದು, ೧ ರಿಂದ ೫ ನೇ, ೬ ರಿಂದ ೧೦ ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ನೋಂದಣಿಗೆ ಶೀಲಾ ಬೋಪಣ್ಣ ೯೯೪೫೭೯೪೪೧೪, ಗಿರಿಜಾ ೯೪೮೦೬೪೫೬೭೨ ಅವರನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.
ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದಿAದ ೧೦ ರಿಂದ ೧೨ ಮಂದಿ ಇರಬೇಕು. ೫ ರಿಂದ ೬ ನಿಮಿಷ ಕಾಲಾವಕಾಶ ಇರಲಿದೆ. ೧ ರಿಂದ ೫ ನೇ, ೬ ರಿಂದ ೧೦ನೇ ತರಗತಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಟಿ.ಕೆ. ವಾಮನ ೭೬೧೯೨೭೦೫೨೯, ಲೀನಾ ೯೪೪೯೩೧೦೨೪೯ ಅವರನ್ನು ಸಂಪರ್ಕಿಸಿ ನೋಂದಣಿ ಮಾಡಬಹುದಾಗಿದೆ.
ಕ್ಲೇ ಮಾಡಲಿಂಗ್ ಸ್ಪರ್ಧೆಯು ೧ ರಿಂದ ೫ನೇ, ೬ ರಿಂದ ೮ನೇ, ೯ ರಿಂದ ೧೦ನೇ ತರಗತಿ ವಿಭಾಗಕ್ಕೆ ನಡೆಯಲಿದ್ದು, ೧.೩೦ ಗಂಟೆ ಕಾಲಾವಕಾಶ ನೀಡಲಾಗುವುದು. ಅಗತ್ಯ ಪರಿಕರ ಹಾಗೂ ಮಣ್ಣನ್ನು ಸ್ಪರ್ಧಿಗಳೆ ತರಬೇಕು. ಚಂದನಾ ೯೯೮೬೯೩೯೩೫೭, ದಾಕ್ಷಾಯಿಣಿ ೮೯೭೧೨೨೭೮೯೭, ಮಮತ ೮೪೩೧೭೬೫೪೩ ಅವರುಗಳನ್ನು ಸಂಪರ್ಕಿಸಬಹುದಾಗಿದೆ.
ಆಟೋಟಗಳ ಸ್ಪರ್ಧೆಗಳು
೧ ರಿಂದ ೫ನೇ ತರಗತಿ ಮಕ್ಕಳಿಗೆ ಕಪ್ಪೆ ಹಾರುವುದು, ಬುಕ್ ಬ್ಯಾಲೆನ್ಸಿಂಗ್, ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ, ೬ ರಿಂದ ೮ನೇ ತರಗತಿ ಮಕ್ಕಳಿಗೆ ಚೀಲದ ಓಟ, ಸಂಗೀತ ಕುರ್ಚಿ, ಸ್ಲೊ ಸೈಕಲ್ ರೇಸ್, ೯ ರಿಂದ ೧೦ನೇ ತರಗತಿ ವಿಭಾಗಕ್ಕೆ ಚೀಲದ ಓಟ, ಸಂಗೀತ ಕುರ್ಚಿ, ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ ನಡೆಯಲಿದೆ.
ಆಟೋಟ ಸ್ಪರ್ಧೆಗಳ ನೋಂದಣಿಗಾಗಿ ಮಹೇಶ್ ಪಿ.ಎಸ್ ೯೭೪೦೦೨೪೨೮೪, ನಿಂಗರಾಜು ೭೭೬೦೨೭೨೮೨೮, ಗಾನ್ ಗಣಪತಿ ೯೪೪೮೩೨೬೦೬೯, ಪ್ರಕಾಶ್ ೯೯೮೬೯೮೬೮೩೨, ಪರಮೇಶ್ ೯೪೮೧೭೭೨೨೭೮, ರಾಘವೇಂದ್ರ ೯೪೪೮೭೨೦೨೪೯ ಅವರನ್ನು ಸಂಪರ್ಕಿಸಬಹುದಾಗಿದೆ.
ಎಲ್ಲಾ ಸ್ಪರ್ಧೆಗಳ ನೋಂದಣಿಗೆ ತಾ. ೨೯ ಕೊನೆಯ ದಿನವಾಗಿದೆ ಎಂದು ದಸರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.