ಮಡಿಕೇರಿ, ಸೆ. ೨೨: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸೂದನ ಎಸ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆಯಿತು.
ನಗರದ ಕೊಡವ ಸಮಾಜದಲ್ಲಿ ನಡೆದ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಸೂದನ ಈರಪ್ಪ ಅವರು, ವರದಿ ಸಾಲಿನಲ್ಲಿ ಸಂಘವು ರೂ. ೨೩,೪೩,೧೫೦ ವ್ಯಾಪಾರ ಲಾಭ ಗಳಿಸಿದ್ದು, ರೂ. ೧೨,೨೫,೭೬೦ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. ೨೫ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ೩೯ ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಖರೀದಿ ಮತ್ತು ಮುಂಗಡ ನೀಡಿ ಠೇವಣಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಕಳೆದ ೨ ವರ್ಷಗಳಿಂದ ಆರಂಭಿಸಲಾಗಿದ್ದು, ಸಂಘದ ಸದಸ್ಯರು ಹಾಗೂ ಏಲಕ್ಕಿ ಬೆಳೆಗಾರರು ಇದರ ಸದುಪಯೋಗ ಪಡೆದು ತಮ್ಮ ಫಸಲಿಗೆ ಯೋಗ್ಯ ಬೆಲೆಯನ್ನು ಪಡೆಯಬೇಕೆಂದು ಕೋರಿದರು.
ಮುಂದಿನ ಮಹಾಸಭೆಯಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಮೂವರು ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕ ರುಗಳಾದ ಕೋಳುಮುಡಿಯನ ಆರ್. ಅನಂತಕುಮಾರ್, ಮಂದ್ರೀರ ಜಿ. ಮೋಹನ್ ದಾಸ್, ಬಿ.ಈ. ಬೋಪಯ್ಯ, ಶಿವಚಾರರ ಎಸ್. ಸುರೇಶ್, ಬಿ.ಸಿ. ಚೆನ್ನಪ್ಪ, ಕುಂಭಗೌಡನ ವಿನೋದ್ ಕುಮಾರ್, ಸಿ.ಪಿ. ವಿಜಯ್ ಕುಮಾರ್, ಪೇರಿಯನ ಕೆ. ಉದಯಕುಮಾರ್, ಪೆಮ್ಮಂಡ ಟಿ. ಬೋಪಣ್ಣ, ಪರಿವಾರ ಎಸ್. ಕವಿತ, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಿರ್ದೇಶಕಿ ಅಂಬೆಕಲ್ಲು ಸುಶೀಲ ಪ್ರಾರ್ಥಿಸಿ, ಕಾರ್ಯ ನಿರ್ವಹಣಾಧಿಕಾರಿ ಎಂ.ಎA. ತಮ್ಮಯ್ಯ ನಿರೂಪಿಸಿ, ಉಪಾಧ್ಯP್ಷÀ ಕೆ.ಕೆ. ಗೋಪಾಲ ವಂದಿಸಿದರು.