ಕೂಡಿಗೆ, ಸೆ. ೨೩: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡಿ, ಸಂಘವು ೨೦೨೩-೨೪ ನೇ ಸಾಲಿನಲ್ಲಿ ರೂ. ೧೪೭.೪೦.ಕೋಟಿ ವ್ಯವಹಾರ ನಡೆಸಿದ್ದು, ಇದರಲ್ಲಿ ಸಹಕಾರ ಸಂಘದ ಬೈಲಾದಂತೆ ರೂ. ೩೨.೭೮.ಕೋಟಿ ಗಳಷ್ಟು ಸಾಲವನ್ನು ವಿತರಿಸಿದ್ದು, ಕಳೆದ ಸಾಲಿಗೆ ಹೋಲಿಸಿದಾಗ ರೂ. ೭.೪೭.ಕೋಟಿ ಹೆಚ್ಚಾಗಿದ್ದು, ಸಂಘದ ಕಾರ್ಯವ್ಯಾಪ್ತಿ ಸದಸ್ಯರುಗಳಿಗೆ ಅವರುಗಳ ಅರ್ಹತೆಗೆ ಹಾಗೂ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲವನ್ನು ವಿತರಣೆ ಮಾಡಲಾಗಿದೆ ಎಂದರು.
ಸಂಘವು ರೂ. ೧೪೭.೪೭ ಕೋಟಿ ವಹಿವಾಟು ನಡೆಸಿದ್ದು, ರೂ. ೭೫.೬೦.ಲಕ್ಷ ನಿವ್ವಳ ಲಾಭ ಗಳಿಸಿದೆ. ೧೫ ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಗಳಿಸಿರುವುದು ಪ್ರಥಮವಾಗಿದೆ ಎಂದರು. ಆಡಳಿತ ಮಂಡಳಿಯು ಸದಸ್ಯರುಗಳ ಸಹಕಾರದೊಂದಿಗೆ ಹೊಸ ಹೊಸ ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಈ ಎಲ್ಲಾ ಪ್ರಗತಿಗೆ ಸದಸ್ಯರ ಸಹಕಾರ ಬಹುಮುಖ್ಯ ಎಂದರು.
ಅಲ್ಲದೆ ಈ ಸಾಲಿನಲ್ಲಿ ವರ್ಷಂಪ್ರತಿಯAತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್ನಿAದ ನೀಡುವ ಬಹುಮಾನವನ್ನು ಪಡೆದುಕೊಂಡಿರುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆದವು. ಅಲ್ಲದೆ ಸಂಘದ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಬಹುಮಾನವನ್ನು ವಿತರಣೆ ಮಾಡಲಾಯಿತು. ೨೦೨೩-೨೪ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಹಿಂದಿನ ಸಾಲಿನ ವರದಿಯ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರುಗಳಾದ ಕೆ.ಟಿ ಅರುಣ್ ಕುಮಾರ್ ಕೃಷ್ಣಗೌಡ, ಕೆ.ಕೆ. ಪವಿತ್ರ, ರಮೇಶ್, ಕೆ.ಜೆ. ಕುಮಾರ್, ನಾಗರಾಜು, ಎಸ್. ಆರ್. ಅರುಣ್ ರಾವ್, ಕೆ.ಬಿ. ರಾಮಚಂದ್ರ, ಕೆ.ಪಿ. ರಾಜು, ಎಸ್, ಎಸ್. ಕೃಷ್ಣ, ಜಯಶ್ರೀ, ವೃತ್ತಿಪರ ನಿರ್ದೇಶಕರಾದ ಆರ್.ಕೆ. ನಾಗೇಂದ್ರ, ಕುಶಾಲನಗರ ವೃತ್ತದ ಮೇಲ್ವಿಚಾರಕ ಅಬ್ದುಲ್ ರಶೀದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ ಹಾಜರಿದ್ದರು. ಸಭೆಯಲ್ಲಿ ಸಂಘದ ವ್ಯಾಪ್ತಿಯ ೧೪ ಗ್ರಾಮಗಳ ಸಾವಿರಾರು ರೈತ ಸದಸ್ಯರು ಭಾಗವಹಿಸಿದ್ದರು.