ಕುಶಾಲನಗರ, ಸೆ. ೨೩: ಕುಶಾಲನಗರ ತಾಲೂಕು ದಂಡಾಧಿಕಾರಿಗಳೊAದಿಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.
ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ತಾಲೂಕು ತºಶೀಲ್ದಾರ್ ಕಚೇರಿ ಮುಂಭಾಗ ಬಿಜೆಪಿ ಪ್ರಮುಖರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಹಶೀಲ್ದಾರ್ ಅವರೊಂದಿಗೆ ತೋರಿದ ವರ್ತನೆ ಅಶೋಕ್ ಅವರ ಹುದ್ದೆಯ ಘನತೆಗೆ ಶೋಭೆಯಲ್ಲ ಇದು ಖಂಡನೀಯ. ಅಧಿಕಾರಿಗಳು ನಿಯಮಾನುಸಾರ ಕೆಲಸ ನಿರ್ವಹಿಸುವ ಸಂದರ್ಭ ಇಂತಹ ಘಟನೆಗಳು ನಡೆಯಬಾರದು ಎಂದರು.
ಇಬ್ಬರು ಸದಸ್ಯರುಗಳಿಗೆ ನಿಯಮಾನುಸಾರ ಮತದಾನ ಮಾಡುವ ಹಕ್ಕು ಲಭಿಸಿದೆ. ಅದನ್ನು ಚುನಾವಣಾ ಅಧಿಕಾರಿಗಳು ಕಾರ್ಯಗತ ಮಾಡುವ ಸಂದರ್ಭ ಅನಾವಶ್ಯಕ ಗೊಂದಲ ಉಂಟು ಮಾಡಿರುವುದು ಸರಿಯಲ್ಲ ಎಂದರು.
ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತು ವಿ.ಪಿ. ಶಶಿಧರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಪಕ್ಷ ಮೇಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಜಯಲಕ್ಷö್ಮಮ್ಮ, ಜಯಲಕ್ಷಿö್ಮ ಚಂದ್ರ, ಎಂ ಕೆ ದಿನೇಶ್, ಶೇಕ್ ಕಲಿಮುಲ್ಲಾ, ನಾಮನಿರ್ದೇಶಿತ ಸದಸ್ಯರಾದ ಜಗದೀಶ್, ನವೀನ್, ಪದ್ಮ, ಕಾರ್ಮಿಕ ಘಟಕದ ಅಧ್ಯಕ್ಷರಾದ ಶಿವಶಂಕರ್ ಇದ್ದರು.