ಕಣಿವೆ, ಸೆ. ೨೩: ಬಸವನಹಳ್ಳಿ ಯಲ್ಲಿರುವ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷ ಎಸ್.ಆರ್. ಅರುಣರಾವ್ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘಕ್ಕೆ ನೂತನ ಸದಸ್ಯರನ್ನು ನೋಂದಾಯಿಸಲು ನಗರವಾಸಿಗಳಿಗಿಂತ ಅರಣ್ಯವಾಸಿಗಳಿಗೆ ಹೆಚ್ಚು ಪ್ರಾಶಸ್ತö್ಯ ಕೊಡುವ ಬಗ್ಗೆ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಘದ ಸದಸ್ಯ ಪ್ರಭಾಕರ್, ನಗರ ವಾಸಿಗಳಲ್ಲಿ ವಾಸವಿರುವ ಆದಿವಾಸಿಗಳಿಗೆ ಸಂಘದಲ್ಲಿ ಸದಸ್ಯತ್ವ ನೀಡಬೇಕೆಂಬ ಪ್ರಸ್ತಾವನೆಯನ್ನು ವಿರೋಧಿಸಿದ ಹಿನ್ನೆಲೆ ಗಿರಿಜನ ಸಹಕಾರ ಸಂಘ ನಡೆಯುತ್ತಿರುವುದೇ ಅರಣ್ಯವಾಸಿಗಳು ಸಂಗ್ರಹಿಸುವ ಅರಣ್ಯ ಉತ್ಪನ್ನಗಳಿಂದ.

ನಗರ ವಾಸಿಗಳು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯಿಂದ ಮಾತ್ರ ಸದಸ್ಯತ್ವ ಕೇಳುತ್ತಾರೆ. ಅವರು ಯಾರೂ ಕೂಡ ಅರಣ್ಯದೊಳಗೆ ತೆರಳಿ ಉತ್ಪನ್ನಗಳನ್ನು ಸಂಗ್ರಹಿಸುತ್ತಾರಾ ಎಂದು ಕಾಳಿಂಗ, ಮಹೇಶ್, ಧರ್ಮ, ಸುನಿಲ್ ರಾವ್ ಮೊದಲಾದವರು ವಿರೋಧ ವ್ಯಕ್ತಪಡಿಸಿದರು. ಬಳಿಕ ಮಹಾಸಭೆಯಲ್ಲಿ ಅರಣ್ಯ ವಾಸಿಗಳಿಗೆ ಸದಸ್ಯತ್ವ ಕೊಡುವ ಬಗ್ಗೆ ತೀರ್ಮಾನಿಸಲಾಯಿತು.

ಸಂಘದ ಆವರಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಯೋಜಿಸಿರುವ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ರೂ. ೨೫ ಲಕ್ಷ ಮಂಜೂರಾಗಿರುವ ಬಗ್ಗೆ ಅಧ್ಯಕ್ಷ ಅರುಣ್ ರಾವ್ ಹೇಳಿದರು.

ಹಾಗೆಯೇ ಸಂಘದ ವ್ಯಾಪ್ತಿಯ ೫೪೧ ಕುಟುಂಬಗಳ ೧೮೨೩ ಮಂದಿಗೆ ಯಶಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ.

ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ೨.೨೦ ಲಕ್ಷ ಲಾಭ ಗಳಿಸಿದೆ

ಸಂಘದ ಮೂಲಭೂತ ವ್ಯವಸ್ಥೆಗಳಿಗಾಗಿ ಜಿಲ್ಲಾ ಸಹಕಾರ ಸಂಘದಿAದ ೨.೫೦ ಲಕ್ಷ ಹಣ ಮಂಜೂರಾಗಿರುವ ಬಗ್ಗೆ ಹೇಳಿದ ಅರುಣ್ ರಾವ್, ಸಂಘದ ಅಭಿವೃದ್ದಿಗೆ ಸದಸ್ಯರು ಹೆಚ್ಚಿನ ರೀತಿ ಶ್ರಮಿಸಬೇಕೆಂದು ಹೇಳಿದರು.

ಸಂಘದ ಉಪಾಧ್ಯಕ್ಷ ಬಿ.ಎನ್. ಮನು, ನಿರ್ದೇಶಕರಾದ ಆರ್.ಕೆ.ಚಂದ್ರು, ಸಿ.ಕೆ. ಉದಯಕುಮಾರ್, ಬಿ.ಎಂ. ಯಶೋಧ, ಬಿ.ಆರ್. ಸುರೇಶ್, ಅಣ್ಣಯ್ಯ, ಎಸ್.ಆರ್. ಕಮಲ, ಕಾವೇರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಹನಿಕುಮಾರ್ ಇದ್ದರು.