ಮಡಿಕೇರಿ, ಸೆ. ೨೧: ಒಮನ್ ದೇಶದ ಮಸ್ಕಟ್ನಲ್ಲಿ ಕೈಲ್ಪೊಳ್ದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಟೀಂ ಕೂರ್ಗ್ ಮಸ್ಕಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಮಸ್ಕಟ್ನಲ್ಲಿ ವಾಸವಿರುವ ಕೊಡವ ಕುಟುಂಬದವರು ಒಟ್ಟಿಗೆ ಸೇರಿ ಕೊಡವ ಉಡುಪು ಧರಿಸಿ ಆಯುಧ ಪೂಜೆ ಸಲ್ಲಿಸಿದರು.
ಕೊಡಗಿನ ಕಕ್ಕಡ ೧೮ರ ವಿಶೇಷದ ಮದ್ದು ಪಾಯಸದೊಂದಿಗೆ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪಂದಿಕರಿ, ಚಾಟ್ಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಕೊಡವ ಲಿಪಿಯಲ್ಲಿನ ಬ್ಯಾನರ್ ಎಲ್ಲರ ಗಮನ ಸೆಳೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ ಐಚಂಡ ಸಾಬು ಪೊನ್ನಪ್ಪ ಹಾಗೂ ಅವರ ಪತ್ನಿ ಶಿಕ್ಷಣ ಇಲಾಖೆಯ ನಿವೃತ್ತ ರಿಜಿಸ್ಟಾçರ್ ಸರಸು ಹಾಜರಿದ್ದರು. ಅವರಿಗೆ ಟೀಂ ಕೂರ್ಗ್ ಮಸ್ಕಟ್ ವತಿಯಿಂದ ಅಧ್ಯಕ್ಷರು ಸ್ವಾಗತ ಕೋರಿದರು.
ನಡಿಕೇರಿಯಂಡ ವಿನೇಶ್ ಈರಪ್ಪ ಕಾರ್ಯಕ್ರಮದ ಕುರಿತು ಮಾತನಾಡಿದರು. ನಾಪಂಡ ಲಕ್ಷಿö್ಮ ಅಯ್ಯಪ್ಪ ಕೈಲ್ಪೊಳ್ದ್ ಆಚರಣೆ ಕುರಿತು ವಿವರಿಸಿದರು. ಮಣವಟ್ಟಿರ ಮೌನ ಮೊಣ್ಣಪ್ಪ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.
ಟೀಂ ಕೂರ್ಗ್ ಮಸ್ಕಟ್ನ ಅಧ್ಯಕ್ಷ ನಡಿಕೇರಿಯಂಡ ವಿನೇಶ್ ಈರಪ್ಪ, ಗೌರವ ಕಾರ್ಯದರ್ಶಿ ಬೊಳ್ಳೆಪಂಡ ಸವಿತ ಗಣಪತಿ, ಖಜಾಂಚಿ ಕುಟ್ಟೇಟಿರ ರಾಗ್ ಕಾವೇರಪ್ಪ, ಸದಸ್ಯ ಬಾಚಮಂಡ ಲವಿನ್ ಮಂದಣ್ಣ, ಐಚಂಡ ಶುÈತಿ ಚಂಗಪ್ಪ, ಮಣವಟ್ಟಿರ ಮೌನ ಮೊಣ್ಣಪ್ಪ, ಪೊನ್ನಕಚ್ಚಿರ ದಿವ್ಯ ನಿಕಿಲ್ ಹಾಗೂ ಪಟ್ರಪಂಡ ನಿಲ್ಮ ಬೋಪಣ್ಣ ಕಾರ್ಯನಿರ್ವಹಿಸಿದರು.