ಚೆಯ್ಯಂಡಾಣೆ, ಸೆ. ೨೧: ದವಸ ಭಂಡಾರಗಳು ಬಲವರ್ಧನೆಗೊಳ್ಳಲು ಸದಸ್ಯರ ಸಹಕಾರ ಮುಖ್ಯ ಎಂದು ಬೇತು ಗ್ರಾಮದ ದವಸ ಭಂಡಾರದ ಅಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ ಹೇಳಿದರು.

ಬೇತು ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಪ್ರಾರಂಭಿಸಿದ ದವಸ ಭಂಡಾರವು ಉತ್ತಮ ರೀತಿಯಲ್ಲಿ ಪ್ರಗತಿಯನ್ನು ಹೊಂದಿದೆ. ಸಂಘವು ಈಗಾಗಲೇ ೨೨೦ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಈಗಾಗಲೇ ಒಂಭತ್ತು ಲಕ್ಷದವರೆಗೆ ವಹಿವಾಟನ್ನು ನಡೆಸುತ್ತಿದೆ. ಸದಸ್ಯರ ಅನುಕೂಲಕ್ಕಾಗಿ ಸಂಘದಿAದ ಸಾಲವನ್ನು ನೀಡುತ್ತಾ ಬರಲಾಗಿದ್ದು, ಸಾಲ ಪಡೆದುಕೊಂಡವರು ನಿಗದಿತ ಸಮಯಕ್ಕೆ ಮರುಪಾವತಿಸಬೇಕು ಎಂದರು. ಅಲ್ಲದೆ ಸಂಘದ ಮರಣ ನಿಧಿಗೆ ನಿಗದಿಪಡಿಸಿದ ಹಣವನ್ನು ಎಲ್ಲರೂ ಪಾವತಿಸಬೇಕು.

ಮರಣ ನಿಧಿಗೆ ಸೇರ್ಪಡೆಗೊಳ್ಳದ ಸದಸ್ಯರು ಸೇರ್ಪಡೆಗೊಂಡು ಸಹಕರಿಸಬೇಕು. ಸಂಘಕ್ಕೆ ಸದಸ್ಯರ ದಾಖಲಾತಿ ಅವಶ್ಯಕತೆ ಇದ್ದು ದಾಖಲಾತಿಗಳನ್ನು ಒದಗಿಸದ ಸದಸ್ಯರು ಶೀಘ್ರದಲ್ಲಿ ದಾಖಲಾತಿಗಳನ್ನು ಒದಗಿಸಿ ಸಹಕರಿಸಬೇಕೆಂದರು. ಶುಚಿತ್ವ ಕಾಪಾಡೋದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಅದರಂತೆ ದವಸ ಭಂಡಾರದ ಕಟ್ಟಡದ ಪರಿಸರದ ಎಲ್ಲೆಂದರಲ್ಲಿ ಕಸ ಹಾಕದೆ ಶುಚಿತ್ವವನ್ನು ಕಾಪಾಡಬೇಕೆಂದರು. ಸಂಘದಿAದ ಸಮುದಾಯ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ಎಲ್ಲರ ಸಹಕಾರ ಇದ್ದರೆ ಶಾಸಕರ ಗಮನಕ್ಕೆ ತಂದು ನಿರ್ಣಯ ಕೈಗೊಳ್ಳಲಾಗುವುದು ಎಂದರು.

ದವಸ ಭಂಡಾರದಲ್ಲಿರುವ ಸದಸ್ಯರ ಮಕ್ಕಳಿಗೆ ೧೮ ವರ್ಷ ತುಂಬಿದ್ದರೆ ಅವರನ್ನು ಇದರ ಸದಸ್ಯರನ್ನಾಗಿಸಬೇಕು. ಇದರಿಂದ ಮುಂದೆ ದವಸ ಭಂಡಾರ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಿರ್ದೇಶಕ ಬೊಳ್ಳೆಪಂಡ ಜಾನ್ ಪೂಣಚ್ಚ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಬೊಳ್ಳೆಪಂಡ ಪೆಮ್ಮಯ್ಯ ವಾರ್ಷಿಕ ಲೆಕ್ಕವನ್ನು ಮಂಡಿಸಿದರು.

ಈ ಸಂದರ್ಭ ದವಸ ಭಂಡಾರದ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ, ನಿರ್ದೇಶಕರಾದ ಕುಟ್ಟಂಜೆಟ್ಟೀರ ಶ್ಯಾಮ್ ಬೋಪಣ್ಣ, ಕೊಂಡೀರ ಸುರೇಶ್, ಚೋಕಿರ ಪ್ರಭು, ಕಾಳೆಯಂಡ ಸಾಬ ತಿಮ್ಮಯ್ಯ, ಪಾತಂಡ ಜಯ, ಅಪ್ಪೇರಿಯಂಡ ಗೌರಮ್ಮ, ಮುಕ್ಕಾಟಿರ ರೋಹಿಣಿ ಸೇರಿದಂತೆ ದವಸ ಭಂಡಾರದ ಸದಸ್ಯರು ಹಾಜರಿದ್ದರು.

ಸಭೆಯಲ್ಲಿ ನಿಶಾಕುಮಾರಿ ಪ್ರಾರ್ಥಿಸಿ, ಬೊಳ್ಳೆಪಂಡ ಹರೀಶ್ ಪೊನ್ನಯ್ಯ ನಿರೂಪಿಸಿ, ಕೊಂಡೀರ ಗಣೇಶ್ ಸ್ವಾಗತಿಸಿ, ಕಲ್ಯಾಟಂಡ ರಮೇಶ್ ಚಂಗಪ್ಪ ವಂದಿಸಿದರು.