ಕೂಡಿಗೆ, ಸೆ. ೨೧: ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ೨೦೨೪-೨೫ನೇ ಸಾಲಿನ ಕುಶಾ ಲನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ವಿಸ್ಮಯಿ ಕೂಡಿಗೆಯಲ್ಲಿ ಚಾಲನೆ ನೀಡಿದರು. ನಂತರ ಮಾತಾನಾಡಿದ ಅವರು, ಕ್ರೀಡೆಯ ಮೂಲಕ ಶಿಸ್ತು, ಸಂಯಮ, ಸನ್ನಡತೆ ತಾಳ್ಮೆಯಂತಹ ಆದರ್ಶ ಗುಣಗಳನ್ನು ಕಲಿಯಬಹುದು ಎಂದರು.

ಈ ಸಂದರ್ಭದಲ್ಲಿ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವ್ ಕುಮಾರ್, ಕ್ರೀಡಾ ತರಬೇತುದಾರರಾದ ವೆಂಕಟೇಶ್, ದೀನಾಮಣಿ, ಬಿಂದ, ಮಂಜುನಾಥ, ಸುರೇಶ್, ನಿವೃತ್ತ ತರಬೇತಿದಾರರಾದ ಅಂತೋಣಿ ಡಿಸೋಜ, ಸೇರಿದಂತೆ ಇನ್ನಿತರರು ಇದ್ದರು.