ನಾಪೋಕ್ಲು, ಸೆ. ೨೧: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಾಪೋಕ್ಲುವಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ಮೂರ್ನಾಡು ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಾಪೋಕ್ಲುವಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ಕಬಡ್ಡಿ ಮತ್ತು ಖೋ-ಖೋ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಖೋ-ಖೋ ದ್ವಿತೀಯ ಸ್ಥಾನ, ಹಾಗೆಯೇ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಖೋ-ಖೋ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಥೆಟಿಕ್ಸ್ ಬಾಲಕರ ವಿಭಾಗದಲ್ಲಿ ವಚನ್ ೪೦೦ ಮೀ. ಓಟ ಪ್ರಥಮ, ವಿಕಾಸ್ ವಿ.ಕೆ. ೧೫೦೦ ಮೀ. ಓಟ ಪ್ರಥಮ, ಲಿತೇಶ್ ಪಿ.ಯು. ೧೫೦೦ ಮೀ. ಓಟ ದ್ವಿತೀಯ, ಉದ್ದಜಿಗಿತ ಮತ್ತು ತ್ರಿವಿಧ ಜಿಗಿತದಲ್ಲಿ ಖುಶಿ ಕೆ.ಎಂ. ಪ್ರಥಮ, ೪x೪೦೦ ಮೀ. ರಿಲೇ ಬಾಲಕರ ತಂಡ ಪ್ರಥಮ ಮತ್ತು ೪x೧೦೦ ಮೀ. ರಿಲೇ ಬಾಲಕರ ತಂಡ ದ್ವಿತೀಯ; ಪ್ರೌಢಶಾಲಾ ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ ಪ್ರೀತಿಕ ೮೦೦ ಮೀ. ದ್ವಿತೀಯ ಸ್ಥಾನ, ಪ್ರಾಥಮಿಕ ವಿಭಾಗದಲ್ಲಿ ಉದ್ದ ಜಿಗಿತ ಗಾನವಿ ದ್ವಿತೀಯ, ೬೦೦ ಮೀ. ಓಟದಲ್ಲಿ ರಚಿತ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಶಾಲೆಯ ಪ್ರಾಂಶುಪಾಲೆ ನೀತಾ ಕೆ.ಡಿ, ದೈಹಿಕ ಶಿಕ್ಷಕಿ ಶ್ಯಾಮಿಲಿ ತಿಳಿಸಿದ್ದಾರೆ.