ಶನಿವಾರಸಂತೆ, ಸೆ. ೨೦: ಸಮೀಪದ ಕೊಡ್ಲಿಪೇಟೆಯ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಸಾಕ್ಷರತಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯಿತಿ ಸದಸ್ಯೆ ಹಸೀನಾಬಾನು, ಗಣಗೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕ ಚೇತನ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೇದಾವತಿ, ಯೂನಿಯನ್ ಬ್ಯಾಂಕ್ನ ಬಸ್ಸಿರಾ ಬಾನು ಜತೆಯಾಗಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ತರಬೇತುದಾರ ಜಿ.ಪಿ. ಚೇತನ್ ಮಾತನಾಡಿ, ಅರಿವು ಕೇಂದ್ರದಲ್ಲಿ ದೊರೆಯುವ ಲ್ಯಾಪ್ ಟಾಪ್, ಮೊಬೈಲ್ಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಪಿಡಿಎಫ್ಗೆ ಸಂಬAಧಿಸಿದ ಮಾಹಿತಿಯನ್ನು ಪಡೆಯಬಹುದು. ಡಿಜಿಟಲ್ ಸಾಕ್ಷರತೆಯ ತರಬೇತಿಯಿಂದ ಮಹಿಳೆಯರಿಗೂ ಉಪಯೋಗವಿದೆ. ಡಿಜಿಟಲ್ ಡಿವೈಸರ್ಗಳ ಮೂಲಕ ಹಣದ ವ್ಯವಹಾರವನ್ನು ಮಾಡಬಹುದು ಎಂದು ತಿಳಿಸಿದರು.
ಗ್ರಂಥಾಲಯ ಮೇಲ್ವಿಚಾರಕಿ ಎಂ.ಬಿ. ಮಮತಾ, ವಿವಿಧ ಒಕ್ಕೂಟಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಎಂ.ಬಿ.ಕೆ, ಎಲ್ಸಿಆರ್ಪಿ, ಪಶುಸಖಿ, ಕೃಷಿಸಖಿ, ಸ್ವಸಹಾಯ ಸಂಘದ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.