ಚೆಯ್ಯಂಡಾಣೆ, ಸೆ. ೨೦: ನಾಪೋಕ್ಲು ಟೌನ್ ಮುಹಿಯ್ಯದ್ದೀನ್ ಸುನ್ನಿ ಜುಮಾ ಮಸೀದಿ ವತಿಯಿಂದ ೩ ದಿನಗಳ ಕಾಲ ನಡೆಯುವ ಮಿಲಾದ್ ಸಮಾವೇಶಕ್ಕೆ ನಾಪೋಕ್ಲುವಿನಲ್ಲಿ ಚಾಲನೆ ನೀಡಲಾಯಿತು.

ಜುಮಾ ನಮಾಜ್ ಬಳಿಕ ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎಚ್.ಅಬ್ದುಲ್ ರೆಹಮಾನ್ ಧÀ್ವಜಾರೋಹಣ ನೆರವೇರಿಸುವುದರ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಮೀಲಾದ್ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉಸ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಮುದರಿಸ್ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು.

ಜಮಾಅತ್ ಖತೀಬ್ ಉಬೈದ್ ಸಖಾಫಿ ಅಲ್ ಅಝರಿ ವಯನಾಡ್ ಮುಖ್ಯ ಪ್ರಭಾಷಣ ಮಾಡಿದರು.

ಪ್ರಾರ್ಥನೆಯ ನೇತೃತ್ವವನ್ನು ಕುಂಜಿಲ ಮುದರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ವಹಿಸಿದ್ದರು. ಸಹ ಕಾರ್ಯದರ್ಶಿ ರಹೀಂ ಸ್ವಾಗತಿಸಿ, ಜಬ್ಬಾರ್ ವಂದಿಸಿದರು. ನಾಪೋಕ್ಲು ಟೌನ್ ಮುಸ್ಲಿಂ ಜಮಾಅತ್, ಸ್ವಾಗತ ಸಮಿತಿ, ಓಎಸ್‌ಎಫ್, ಯುಎಇ ಸಮಿತಿ, ಮಹದಿನುಲ್ ಐಎಲ್‌ಎಂ ದರ್ಸ್, ಎಚ್‌ಐಎಂ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಇದ್ದರು.