ಮಡಿಕೇರಿ, ಸೆ. ೧೯: ಕೈಲ್‌ಪೊಳ್ದ್ ಅಂಗವಾಗಿ ವೀರಾಜಪೇಟೆಯ ಮಾರ್ಕ್ಸ್ಮೆನ್ ಸಂಸ್ಥೆ ವರ್ಷಂಪ್ರತಿ ಶೂಟಿಂಗ್ ಸ್ಪರ್ಧೆ ಏರ್ಪಡಿಸಲಾಗುತ್ತಿದು, ಪ್ರಸಕ್ತ ವರ್ಷವೂ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಪರ್ಧೆ ಜರುಗಿತು.

ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ೧೧೦ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. .೨೨ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕಡಗದಾಳುವಿನ ಅಜ್ಜೀರಂಡ ಬೋಪಣ್ಣ ಪ್ರಥಮ ಸ್ಥಾನಗಳಿಸಿ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ ಗಳಿಸಿದರು. ಚೀಯಕಪೂವಂಡ ಗ್ರೇಸ್ ದ್ವಿತೀಯ ಹಾಗೂ ಬಡುವಂಡ ಶ್ಲೋಕ್ ತೃತೀಯ ಸ್ಥಾನ ಪಡೆದುಕೊಂಡದರು.