ಮಡಿಕೇರಿ, ಸೆ. ೨೦: ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚೇರಂಬಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ೧೬ ಪ್ರಥಮ, ೧೬ ದ್ವಿತೀಯ, ೪ ತೃತೀಯ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಹಿಂದಿ ಕಂಠಪಾಠ ಜಿತಿನ್ ಕೆ.ಜಿ. ಪ್ರಥಮ, ಕನ್ನಡ ಕಂಠಪಾಠ ಅನ್ವಿತಾ ಸುದೀಪ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ಸುಹೈಬ್ ತೃತೀಯ, ದೇಶಭಕ್ತಿಗೀತೆ ಸಮೀಕ್ಷ ಪ್ರಥಮ, ಕಥೆ ಹೇಳುವುದು-ಚರಿಷ್ಮ ಚೇತನ್ ಪ್ರಥಮ, ಚಿತ್ರಕಲೆ-ವಿಸ್ಮಯ ಟಿ ವಿ ದ್ವಿತೀಯ, ಅಭಿನಯ ಗೀತೆ-ಪ್ರೇಕ್ಷ ಪೊನ್ನಮ್ಮ ದ್ವಿತೀಯ, ಕ್ಲೇ ಮಾಡೆಲಿಂಗ್- ಉಜ್ವಲ್ ಪ್ರಥಮ, ಭಕ್ತಿಗೀತೆ - ವರುಣಿಕ ಪಿ. ಎಂ ದ್ವಿತೀಯ, ಅಶುಭಾಷಣ -ಜಸ್ಮಿತ ದ್ವಿತೀಯ, ಕವನ ವಾಚನ - ಆಫೀಯ ಪ್ರಥಮ, ಮಿಮಿಕ್ರಿ- ದುಷ್ಯಂತ್ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾರೆ.
ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಭಾಷಣದಲ್ಲಿ ಇಂಚರ ಕೆ.ಕೆ. ಪ್ರಥಮ, ಆಂಗ್ಲ ಭಾಷಣದಲ್ಲಿ ಮೋಕ್ಷ ಬೋಪಣ್ಣ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ-ಅನಘ ಪ್ರಥಮ, ಹಿಂದಿ ಭಾಷಣ-ಚಕ್ಷ ಕಾವೇರಮ್ಮ ಪ್ರಥಮ, ಜಾನಪದ ಗೀತೆ ಮಿಲನ ಕೆ. ಬಿ. ದ್ವಿತೀಯ, ಭಾವಗೀತೆ-ಪೂರ್ಣ ಪ್ರಥಮ, ಭರತನಾಟ್ಯ-ಅನಘ ಪ್ರಥಮ, ಪ್ರಬಂಧ ರಚನೆ-ತ್ರಿಶಾ ಕೆ.ಜೆ. ದ್ವಿತೀಯ, ಚಿತ್ರಕಲೆ-ಜಶ್ಮಿತಾ ಕೆ. ಜೆ. ದ್ವಿತೀಯ, ಮಿಮಿಕ್ರಿ-ದೀಕ್ಷಿತ್ ದ್ವಿತೀಯ, ಚರ್ಚಾ ಸ್ಪರ್ಧೆ-ಮೋಕ್ಷ ಬೋಪಣ್ಣ ತೃತೀಯ, ರಂಗೋಲಿ-ನೀಮಾ ಎಂ.ಎ. ದ್ವಿತೀಯ, ಗಜಲ್-ಮಯೂರಿ ಪಿ. ಎನ್.- ತೃತೀಯ, ಕವನ ವಾಚನ - ಯಶಿಕ ಪಿ.ಎನ್. ಪ್ರಥಮ, ಆಶುಭಾಷಣ - ತ್ರಿಷಾ ಎ. ಎನ್. ಪ್ರಥಮ, ಹಾಗೂ ರಸಪ್ರಶ್ನೆಯಲ್ಲಿ ದ್ವಿತೀಯ, ಕವ್ವಾಲಿಯಲ್ಲಿ ಫೈಝಲ್ ಮತ್ತು ತಂಡ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯ ಕುದುಪಜೆ ಕವನ್ ಕುಮಾರ್ ತಿಳಿಸಿದ್ದಾರೆ.