ಚೆಟ್ಟಳ್ಳಿ, ಸೆ. ೧೯: ಚೆಟ್ಟಳ್ಳಿ ಕೊಡವ ಸಮಾಜದ ೨೦೨೩-೨೪ನೇ ಸಾಲಿನ ಮಹಾಸಭೆ ಹಾಗೂ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟ ತಾ. ೨೨ ರಂದು ಪೂರ್ವಾಹ್ನ ೧೦ ಗಂಟೆಗೆ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಹಾಸಭೆ, ಸನ್ಮಾನ ಕಾರ್ಯಕ್ರಮದ ನಂತರ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟಕ್ಕೆ ಚಾಲನೆ ದೊರಕಲಿದೆ. ಗುರುಕಾರೋಣನಿಗೆ ಮೀದಿ ಇಡುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ವಿವಿಧ ಮನೋರಂಜನಾ ಕಾರ್ಯಕ್ರಮ ನೆರವೇರಲಿದೆ ಎಂದು ಸಮಾಜದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.