ಮಡಿಕೇರಿ, ಸೆ. ೨೦: ಈ ಹಿಂದೆ ತಾನು ಕಂದಾಯ ಸಚಿವನಾಗಿದ್ದ ಸಂದರ್ಭ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ಗುತ್ತಿಗೆ ನೀಡುವ ವಿಚಾರಕ್ಕೆ ಸಂಬAಧಿಸಿದ ಎಲ್ಲಾ ಪ್ರಕ್ರಿಯೆ ನಡೆಸಿ ಸ್ವರೂಪವನ್ನು ರಚಿಸಿ ನೀಡಿದ್ದೇನೆ; ಈ ವಿಷಯದಲ್ಲಿ ಇಂದಿನ ಕಾಂಗ್ರೆಸ್ ಸರಕಾರದ ಪಾತ್ರವೇನಿಲ್ಲ ಎಂದು ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಸದಸ್ಯತ್ವ ಅಭಿಯಾನ ಸಂಬAಧ ಸಭೆಯಲ್ಲಿ ಪಾಲ್ಗೊಂಡ ಆರ್. ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಹಲವರು ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರನ್ನು ಶಶಕ್ತಗೊಳಿಸದ ನಿಟ್ಟಿನಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ಸಂಬAಧ ಕ್ರಮಕ್ಕೆ ನಮ್ಮ ಹಿಂದಿನ ಬಿಜೆಪಿ ಸರಕಾರ ಮುಂದಾಗಿತ್ತು. ಕಂದಾಯ ಸಚಿವನಾಗಿದ್ದ ತಾನು ಈ ಕುರಿತು ಅಧ್ಯಯನ ನಡೆಸಿ ಕಾಯಿದೆ, ನಿಯಮ, ದರವನ್ನು ನಿಗದಿ ಮಾಡಿ ಸಂಪೂರ್ಣವಾದ ಸ್ವರೂಪ ರೂಪಿಸಿದ್ದೆ. ಈ ಸರಕಾರ ಅದನ್ನು ಅನುಷ್ಠಾನಗೊಳಿಸಿದೆ ಅಷ್ಟೆ. ಈ ನಿಯಮದಿಂದ ಸರಕಾರಕ್ಕೆ ಆದಾಯ ಬರುತ್ತದೆ. ರೈತರಿಗೂ ಸಹಾಯವಾಗುತ್ತದೆ ಎಂದು ಅವರು, ೬೦ ವರ್ಷಗಳ ಹಿಂದೆಯೇ ಈ ನಿಯಮ ಜಾರಿ ಮಾಡಿದ್ದರೆ ರಾಜ್ಯಕ್ಕೆ ಸಾವಿರಾರು ಕೋಟಿ ಆದಾಯ ಬರುತಿತ್ತು. ಒತ್ತುವರಿದಾರ ಎಂಬ ಹಣೆಪಟ್ಟಿಯೂ ಬಡರೈತರಿಂದ ದೂರವಾಗುತಿತ್ತು ಎಂದರು.
ಸದಸ್ಯತ್ವ ಅಭಿಯಾನ
ದೇಶದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಂಡಿದ್ದು, ರಾಜ್ಯದಲ್ಲಿ ೧.೩೦ ಕೋಟಿ ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ. ಈ ಹಿನ್ನೆಲೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಪಕ್ಷಗಳಿಗೆ ಸದಸ್ಯತ್ವ ಜೀವಾಳವಾಗಿದ್ದು, ಅತೀ ಹೆಚ್ಚಿನ ಸದಸ್ಯರು ಹೊಂದಿರುವ ಪಕ್ಷವಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಅಭಿಯಾನ ಕೈಗೊಂಡಿದ್ದೇವೆ. ಬೇರೆ ಪಕ್ಷಗಳಿಗೆ ಸದಸ್ಯತ್ವ ಸಾಂಕೇತಿಕವಾಗಿದೆ. ಕಾಂಗ್ರೆಸ್ ಪಕ್ಷವಂತು ಸದಸ್ಯರ ಮೇಲೆ ನಿಂತಿಲ್ಲ. ಕುಟುಂಬದ ಮೇಲೆ ನಿಂತಿದೆ ಎಂದು ಅಶೋಕ್ ಆರೋಪಿಸಿದರು.
ಗಲಭೆಗಳಿಗೆ ವೈಫಲ್ಯ ಕಾರಣ
ಗಣೇಶ ವಿಸರ್ಜನೋತ್ಸವ ಸಂದರ್ಭ ನಡೆಯುತ್ತಿರುವ ಗಲಭೆಗಳಿಗೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವೈಫಲ್ಯ ಕಾರಣ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಎಲ್ಲ ವಿಚಾರಗಳಿಗೂ ವಿಪಕ್ಷವನ್ನು ಬೊಟ್ಟು ಮಾಡುವುದು ಸರಿಯಲ್ಲ. ಗಲಭೆಗಳು ಸರಕಾರದ ವೈಫಲ್ಯದಿಂದ ಆಗುತ್ತಿವೆ. ಇದಕ್ಕೆ ಬಿಜೆಪಿ ಕುಮ್ಮಕ್ಕು ಎನ್ನಲು ನಾಚಿಕೆಯಾಗಬೇಕು. ತಾನೂ ಸೇರಿದಂತೆ ಬಿಜೆಪಿಯ ಹಲವರ ವಿರುದ್ಧ ಪ್ರಕರಣ ದಾಖಲಿಸಿರುವುದು ಯಾಕೆ.? ಎಂದು ಪ್ರಶ್ನಿಸಿದ ಅವರು, ಎಲ್ಲವನ್ನು
(ಮೊದಲ ಪುಟದಿಂದ) ವಿಪಕ್ಷದ ಮೇಲೆ ಹಾಕುವ ಸಂಚು ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ. ಉಚಿತ ಭಾಗ್ಯದಿಂದ ರಾಜ್ಯ ದಿವಾಳಿಯಾಗಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ, ಅಂಗನವಾಡಿ ಕಾರ್ಯ ಕರ್ತೆಯರಿಗೆ ಸಂಬಳ ನೀಡಲಾಗದ ಪರಿಸ್ಥಿತಿ ಬಂದಿರುವುದು ಸರಕಾರದ ದುರಾಡಳಿತಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಇದುವರೆಗೂ ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡಿಲ್ಲ. ಬೆಲೆ ಏರಿಕೆ, ಮುದ್ರಾಂಕ ಶುಲ್ಕ ಹೆಚ್ಚಳ ಮೂಲಕ ಸಾಮಾನ್ಯ ಜನರಿಗೆ ಗಾಯದ ಮೇಲೆ ಸರಕಾರ ಬರೆ ಎಳೆಯುತ್ತಿದೆ. ಇದೀಗ ಗಾಳಿಗೆ ತೆರಿಗೆ ಹಾಕುವುದು ಮಾತ್ರ ಉಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಗಣೇಶ ಪ್ರತಿಷ್ಠಾಪನೆ-ವಿಸರ್ಜನೆ ಅವಧಿಯನ್ನು ಪೊಲೀಸರು ನಿರ್ಧರಿಸುತ್ತಿರುವುದು ಖಂಡನೀಯ. ವಿಘ್ನ ನಿವಾರಕ ಗಣೇಶನಿಗೆ ವಿಘ್ನವನ್ನು ಕಾಂಗ್ರೆಸ್ ನೀಡುತ್ತಿದೆ. ಓಲೈಕೆ ರಾಜಕಾರಣಕ್ಕೆ ಮುಂದಿನ ದಿನದಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ. ಗಣಪತಿ ಉತ್ಸವಕ್ಕೆ ತಡೆಯೊಡ್ಡುವ ಕೆಲಸ ನಡೆಯಬಾರದು ಎಂದು ಅಶೋಕ್ ಒತ್ತಾಯಿಸಿದರು.
ಮುನಿರತ್ನ ೩೦ ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದವರು ಇದೀಗ ಅವರ ವಿರುದ್ಧವೇ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ ಆರ್. ಅಶೋಕ್, ಅಧಿಕಾರಕ್ಕೆ ಬಂದ ಕೆಲ ಅವಧಿಯಲ್ಲಿ ಸರಕಾರದ ವಿರುದ್ಧ ಜನವಿರೋಧಿ ಅಲೆ ಸೃಷ್ಟಿಯಾಗಿದೆ. ಖಜಾನೆ ಖಾಲಿಯಾಗಿ ಸಾಲ ಪಡೆಯುವ ದುಸ್ಥಿತಿಗೆ ಸರಕಾರ ತಲುಪಿದೆ. ಸರಕಾರದ ತಪ್ಪನ್ನು ಎತ್ತಿ ತೋರಿಸಿ ಕಟ್ಟಿ ಹಾಕುವ ಕೆಲಸ ನಮ್ಮಿಂದಾಗಿದೆ ಎಂದರು.
ಈ ಸಂದರ್ಭ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಮಂಡೇಪAಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲೀರ ಚಲನ್, ಲೋಕೇಶ್, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಶಿಸ್ತು ಸಮಿತಿ ಅಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹಾಜರಿದ್ದರು.