ಮಡಿಕೇರಿ, ಸೆ. ೧೯: ೧೯ನೇ ಕರ್ನಾಟಕ ಬೆಟಾಲಿಯನ್ ಮಡಿಕೇರಿಯ ಸೀನಿಯರ್ ಡಿವಿಷನ್ ಕೆಡೆಟ್ ಆಗಿರುವ ಧ್ಯಾನ್ ನಾಚಪ್ಪ ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿ ಕರ್ನಾಟಕ ಮತ್ತು ಗೋವಾ ಡೆರೈಕ್ಟರ್ ಇಂಟರ್ ಗ್ರೂಪ್ ಸ್ಪರ್ಧೆಯಲ್ಲಿ ಮಂಗಳೂರು ವಿಭಾಗವನ್ನು ಪ್ರತಿನಿಧಿಸಿದ್ದಾರೆ. ಇವರು ಕುಟ್ಟಾದ ಮೋಹನ್ ಮಾಚಯ್ಯ ಮತ್ತು ದೀಪಾ ದಂಪತಿಯ ಪುತ್ರ. ಗೋಣಿಕೊಪ್ಪದ ಕೂರ್ಗ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ.