ಮಡಿಕೇರಿ, ಸೆ. ೧೯: ಕರ್ನಾಟಕ ರಾಜ್ಯ ಮಹಿಳೆಯರ ಸಬ್ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.೨೩ ರಂದು ಬೆಂಗಳೂರಿನ ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯:೩೦ ರಿಂದ ನಡೆಯಲಿದೆ.

ತೆಲಂಗಾಣದ ಹೈದರಾಬಾದ್‌ನಲ್ಲಿ ೧೨ ರಿಂದ ೨೨ ಅಕ್ಟೋಬರ್‌ವರೆಗೆ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳೆಯರ ರಾಷ್ಟಿçÃಯ ಚಾಂಪಿಯನ್ ಶಿಪ್ ನಡೆಯಲಿದ್ದು, ಆಯ್ಕೆಯಾದ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ೨೦೦೮ರ ಜನವರಿ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಅವರು ತಿಳಿಸಿದ್ದಾರೆ.