ಕೂಡಿಗೆ, ಸೆ. ೧೯: ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ "ಬೇಟಿ ಬಚಾವೊ ಬೇಟಿ ಪಡಾವೋ" ಕಾರ್ಯಕ್ರಮದಡಿ ಯಲ್ಲಿ ತಾಲೂಕು ಮಟ್ಟದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ. ಶಿವಕುಮಾರ್ ನೆರವೇರಿಸಿ, ಕಾರ್ಯಕ್ರಮದ ಕುರಿತು ಮಾತನಾಡಿದರು.
ಇಂದು ಹಲವಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಪೋಷಕರ ಪಾತ್ರ ಮುಖ್ಯವಾಗಿದೆ. ಕಾರಣ ಮಕ್ಕಳ ಪೋಷಕರು ಇಂದು ಉದ್ಯೋಗದ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಮಕ್ಕಳನ್ನು ಶಾಂತ ವಾಗಿರಿಸಲು ಸಿಹಿತಿನಿಸು, ಬಿಸ್ಕೆಟ್, ಚಿಪ್ಸ್ ನೀಡುತ್ತಿದ್ದು, ಇದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮಕ್ಕಳಿಗೆ ಪೌಷ್ಟಿಕಾಹಾರ ಜೊತೆ ಹಣ್ಣುಗಳು, ಮೊಟ್ಟೆ, ಕಾಳುಗಳನ್ನು ನೀಡಿ ಮಕ್ಕಳ ಆರೋಗ್ಯ ಕಾಪಾಡಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್ ವಹಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿರುವ ಭಾಗ್ಯಲಕ್ಷಿö್ಮ/ಸುಕನ್ಯ ಸಮೃದ್ಧಿ, ಮಾತೃ ವಂದನಾ ಯೋಜನೆಯ ಕುರಿತು ತಿಳಿಸಿದರು. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಜಿಲ್ಲಾಸ್ಪತ್ರೆಯಲ್ಲಿ ಓಖಅ (ಓuಣಡಿiಣioಟಿ ಖehಚಿbiಟiಣಚಿಣioಟಿ ಅeಟಿಣeಡಿ) ಇದ್ದು ಇಲ್ಲಿ ಹೆಚ್ಚಿನ ಆರೋಗ್ಯದ ಕಾಳಜಿಗಾಗಿ ಮಕ್ಕಳನ್ನು ದಾಖಲಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ ಮುದೋಳ್ ಹಾಗೂ ಮೇಲ್ವಿಚಾರಕಿ ಸಾವಿತ್ರವ್ವ, ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್. ಕೇಶಿನಿ, ಪೋಷಣಾ ಅಭಿಯಾನದ ತಾಲೂಕು ಸಂಯೋಜಕ ಕೆ.ಎನ್. ರಂಜಿತ, ಆರೋಗ್ಯ ಇಲಾಖೆಯ ಡಯಟೀಷಿಯನ್ ನಯನಾ ಹಾಗೂ ಹೇಮಲತಾ ಇದ್ದರು.