ಪೆರಾಜೆ, ಸೆ. ೨೦: ಪೆರಾಜೆಯ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಪೆರಾಜೆ ಇದರ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ರಮೇಶ್ ಮಜಿಕೋಡಿ, ಉಪಾಧ್ಯಕ್ಷರಾಗಿ ದಿವ್ಯಪ್ರಕಾಶ್ ಕೊಳಂಗಾಯ, ಕಾರ್ಯದರ್ಶಿಯಾಗಿ ಯತಿಶ್ಯಾಂ ಕುಂಬಳಚೇರಿ ಹಾಗೂ ಖಜಾಂಚಿಯಾಗಿ ಹರ್ಷಿತ್ ಎನ್. ಮಜಿಕೋಡಿ ಆಯ್ಕೆಯಾದರು.

ವೈನಾಟ್ ಕುಲವನ್ ಸಭಾಂಗಣದಲ್ಲಿ ಭುವನ್ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು. ಸಂಘದ ಕ್ರೀಡಾ ನಿರ್ದೇಶಕರಾಗಿ ರಜತ್(ಹರ್ಷಿತ್) ಮಜಿಕೋಡಿ, ಪ್ರನೀತ್ ಕುಂಬಳಚೇರಿ, ಸಾಂಸ್ಕೃತಿಕ ನಿರ್ದೇಶಕರಾಗಿ ರಾಜೇಶ್ ಕುಂಬಳಚೇರಿ, ಪುನೀತ್ ನೆಕ್ಕಿಲ, ಹೇಮಕುಮಾರ್ ಕುಂಬಳಚೇರಿ ಅವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ ಪ್ರಾರ್ಥಿಸಿ, ಕಾರ್ಯದರ್ಶಿ ಜೀವನ್ ಮಜಿಕೋಡಿ ಸ್ವಾಗತಿಸಿ, ಕೋಶಾಧಿಕಾರಿ ಪ್ರವೀಣ್ ಮಜಿಕೋಡಿ ವಂದಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಂಬಳಚೇರಿ, ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.