*ಗೋಣಿಕೊಪ್ಪ, ಸೆ. ೧೯: ಗೋಣಿಕೊಪ್ಪ ದಸರಾ ಆಚರಣೆ ಪ್ರಯುಕ್ತ ನಡೆಯುವ ಮಹಿಳಾ ದಸರಾದ ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ೪೬ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಮಹಿಳಾ ದಸರಾವನ್ನು ಅ. ೦೬ ಎಂದು ಹಮ್ಮಿಕೊಳ್ಳಲಾಗಿದೆ.

ಹಗ್ಗಜಗ್ಗಾಟ (೭ ಜನರ ತಂಡ), ರಂಗೋಲಿ ಸ್ಪರ್ಧೆ, ಬಾಲ್ ಇನ್ ದ ಬಾಸ್ಕೆಟ್, ಕೈಕಟ್ಟಿ ಸೇಬನ್ನು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ರಂಗೋಲಿ ಮತ್ತು ಹಗ್ಗಜಗ್ಗಾಟದ ನೋಂದಣಿಗಾಗಿ ಮಂಜುಳಾ ೯೪೪೮೭೨೧೦೧೭ ಅವರನ್ನು ಸಂಪರ್ಕಿಸಬಹುದಾಗಿದೆ.

೪+೧ ನಿಮಿಷ ಅವಧಿಯ ಜಾನಪದ ಗೀತೆ ಸ್ಪರ್ಧೆ (ಆರರಿಂದ ಎಂಟು ಜನರ ತಂಡ), ೫+೧ ನಿಮಿಷ ಅವಧಿಯ ಸಾಮೂಹಿಕ ನೃತ್ಯ (ಎಂಟು ಜನ ಮೇಲ್ಪಟ್ಟು ತಂಡ) ಫ್ಯಾಶನ್ ಶೋ (ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಗಳು) ನೋಂದಣಿಗಾಗಿ ವರಲಕ್ಷಿö್ಮ ೯೯೮೦೧೮೮೪೨೯ ಅವರನ್ನು ಸಂಪರ್ಕಿಸಬಹುದಾಗಿದೆ.

೨೧ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಸ್ಪರ್ಧೆಯಲ್ಲಿ ರಂಗೋಲಿ ಪುಡಿ ಮಾತ್ರ ಬಳಸಬೇಕು. ಸೀಮೆ ಸುಣ್ಣ ಬಳಸುವಂತಿಲ್ಲ. ೫*೫ ವಿಸ್ತೀರ್ಣದ ರಂಗೋಲಿ ಬಿಡಿಸಲು ಅವಕಾಶವಿದ್ದು, ಬಿಡಿಸಲು ಒಂದೂವರೆ ಗಂಟೆಯ ಕಾಲಾವಕಾಶ ನೀಡಲಾಗುತ್ತದೆ. ಸೆ. ೩೦ ರೊಳಗಾಗಿ ಆಸಕ್ತರು ನೋಂದಣಿಗೆ ಅವಕಾಶವಿದೆ ಎಂದು ಮಹಿಳಾ ದಸರಾದ ಅಧ್ಯಕ್ಷೆ ಮಂಜುಳಾ ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.