ಸೋಮವಾರಪೇಟೆ, ಸೆ. ೨೦: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಾಗಾರ ಒಕ್ಕಲಿಗರ ಸಂಘದ ಶ್ರೀಗಂಧ ಹಾಲ್ನಲ್ಲಿ ನಡೆಯಿತು.
ಸಾಯಿ ಆಸ್ಪತ್ರೆಯ ವೈದ್ಯಾಧಿಕಾರಿ ಇಮಾನಿ ಅವರು ಮಾಹಿತಿ ನೀಡಿ, ಗರ್ಭಕಂಠದ ನಿಯತಕಾಲಿಕ ತಪಾಸಣೆ ಮತ್ತು ಎಚ್ಪಿವಿ ಸೋಂಕಿನ ವಿರುದ್ಧ ವ್ಯಾಕ್ಸಿನೇಷನ್ಗಳು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದ ಅವರು, ರೋಗದ ಆರಂಭಿಕ ಹಂತ, ರೋಗ ಲಕ್ಷಣಗಳು, ಅಪಾಯಕಾರಿ ಅಂಶಗಳು, ಚಿಕಿತ್ಸಾ ವಿವರಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಕ್ಲಬ್ ಸದಸ್ಯೆ ಹಾಗು ಶಿಕ್ಷಕಿ ಚಂದ್ರಕಲಾ ಬೋಜರಾಜ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷೆ ಸಂಗೀತಾ ದಿನೇಶ್, ಕಾರ್ಯದರ್ಶಿ ಸುಮಲತಾ ಪುರುಷೋತ್ತಮ್ ಉಪಸ್ಥಿತರಿದ್ದರು.