ಸುAಟಿಕೊಪ್ಪ, ಸೆ. ೧೯: ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ವಿಜಯ ಪ್ಲಾಂಟೇಷನ್ ಸಪ್ಲಯಸ್ ಸುಂಟಿಕೊಪ್ಪ ಹಾಗೂ ಕಾಫಿ ಮಂಡಳಿ ಸಹಯೋಗದಲ್ಲಿ ಸುಂಟಿಕೊಪ್ಪ ಕೊಡವ ಸಮಾಜ ಸಭಾಂಗಣದಲ್ಲಿ ಕಾಫಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಕೊಡಗು ಕಾಫಿ ಬೆಳೆಗಾರರ ಸಂಘದ ಮಾಜಿ ಚೇರ್ಮೆನ್ ಅಪ್ಪಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಾಂಕ್ ಶ್ರೀನಿವಾಸ್ ವಹಿಸಿದ್ದರು. ಈ ಸಂದರ್ಭ ಕಾಫಿ ಮತ್ತು ಇತರ ಬೆಳೆಗಳಿಗೆ ಲಘು ಪೋಷಕಾಂಶಗಳ ಬಗ್ಗೆ ಕೋರಮಂಡಲ್ ಕಂಪೆನಿ ಡಾ. ರಾಜ್ಶೇಖರ್ ಮಾಹಿತಿ ನೀಡಿದರು. ಕಾಫಿಯಲ್ಲಿನ ಅಂತರ ಬೇಸಾಯಗಳ ಬಗ್ಗೆ ಡಾ. ಮುರಳೀಧರ್ ವಿವರಿಸಿದರು. ಕಾಫಿ ಮಂಡಳಿ ವಿಜ್ಞಾನಿ ಡಾ. ರಂಜಿತ್ ಕುಮಾರ್ ಕಾಫಿ ಮಂಡಳಿಯಿAದ ದೊರೆಯುವ ಸಬ್ಸಿಡಿ ಸ್ಕೀಮ್ಗಳ ಬಗ್ಗೆ ವಿವರಿಸಿದರು. ಕಾಫಿ ಮಂಡಳಿ ಹಿರಿಯ ವಿಜ್ಞಾನಿ ಡಾ. ಮಂಜುನಾಥ್ ರೆಡ್ಡಿ ಕಾಫಿ ಗಿಡಗಳ ಕಾಂಡಕೊರಕ ಹುಳುಗಳ ಮತ್ತು ಬೆರಿ ಬೋರರ್ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ ಸಂಸ್ಥೆಯ ಗ್ಲೆನ್ ಮೆನೆಜಸ್ ನಿರೂಪಿಸಿ, ಮಾಜಿ ಅಧ್ಯಕ್ಷ ಎಸ್.ಜಿ ಶ್ರೀನಿವಾಸ್ ಸ್ವಾಗತಿಸಿ, ಡಾ. ರಾಜಶೇಖರ್ ವಂದಿಸಿದರು.
ಸುAಟಿಕೊಪ್ಪ ಸುತ್ತಮುತ್ತಲಿನ ಕಾಫಿ ಬೆಳೆಗಾರರು ಹಾಗೂ ಲಯನ್ಸ್ ಸಂಸ್ಥೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.