ಐಗೂರು, ಸೆ. ೧೮: ಐಗೂರಿನ ಸ.ಪ.ಪೂರ್ವ ಕಾಲೇಜಿನಲ್ಲಿ ಸುಮಾರು ೧೩ ವರ್ಷಗಳ ಕಾಲ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇದೀಗ ಸೋಮವಾರಪೇಟೆಯ ಸ.ಪ.ಪೂರ್ವ ಕಾಲೇಜಿಗೆ ವರ್ಗಾವಣೆಗೊಂಡ ಶಿಕ್ಷಕಿ ಎಸ್.ಕೆ. ರಾಜರತ್ನ ಅವರನ್ನು ಶಾಲಾ ವತಿಯಿಂದ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶಿಕ್ಷಕಿ ರಾಜರತ್ನ ಅವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಬೇಕೆಂದರು. ಶಿಕ್ಷಕಿ ರಾಜರತ್ನ ಅವರಿಗೆ ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಂದ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷೆ ಶ್ವೇತ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯಶ್ವಂತ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಉಮೇಶ್, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕಿಯರಾದ ಎಸ್.ಎಸ್. ರಂಜಿನಿ, ರೇಖಾ, ಗುಲಾಬಿ, ಮತ್ತು ಶಶಿಕಲಾ, ದ್ವಿ. ದರ್ಜೆ ಸಿಬ್ಬಂದಿ ದಿನೇಶ್, ಶಿ. ಮಂಜುನಾಥ್, ದೈ.ಶಿ. ಶಿಕ್ಷಕ ಕೃಷ್ಣಪ್ಪ, ಕಾಜೂರು ಶಾಲೆಯ ಮು.ಶಿ. ಸರಳಕುಮಾರಿ, ಶಿ. ಇಂದಿರಾ, ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳು ಹಾಜರಿದ್ದರು.