ಕೂಡಿಗೆ, ಸೆ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಹಾರ ದಾಸ್ತಾನು ಕೊಠಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನ ನಡೆದಿದೆ.
ಕೊಠಡಿಯಲ್ಲಿ ಆಹಾರ ದಾಸ್ತಾನು ಇಲ್ಲದ ಕಾರಣ ಕಳ್ಳರು ಅಲ್ಲಿದ್ದ ಚೀಲಗಳನ್ನು ಚಲ್ಲಾಪಿಲ್ಲಿ ಮಾಡಿ ತೆರಳಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಶಾಲಾ ಮುಖ್ಯೋಪಾಧ್ಯಾಯಿನಿ ದೂರು ನೀಡಿದ್ದಾರೆ.