ಮಡಿಕೇರಿ, ಸೆ. ೧೮: ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾಅತ್‌ನ ಆಶ್ರಯದಲ್ಲಿ ತಾ.೨೦ರಿಂದ ೨೨ರವರೆಗೆ ಮಿಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಮಾಅತ್‌ನ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಮಾನ್; ಒಟ್ಟು ೨೦ ಜಮಾಅತ್‌ಗಳು ಭಾಗವಹಿಸಲಿರುವ ಮಿಲಾದ್ ಸಮಾವೇಶ ಇದಾಗಿದ್ದು, ತಾ.ರಂದು ಜುಮುಅ ನಮಾಜ್‌ನ ನಂತರ ಧ್ವಜಾರೋಹಣ ನಡೆಯಲಿದೆ. ಸಂಜೆ ೭ ಗಂಟೆಗೆ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು, ಜಮಾಅತ್‌ನ ಮುರ‍್ರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಉದ್ಘಾಟಿಸುವರು. ಮಿಲಾದ್ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉಸ್ಮಾನ್ ಹಾಜಿ ಅಧ್ಯಕ್ಷತೆ ವಹಿಸುವರು. ಜಮಾಅತ್‌ನ ಖತೀಬ್ ಉಬೈದ್ ಸಖಾಫಿ ಅಲ್ ಅಝ್‌ಹರಿ ವಯನಾಡ್ ಭಾಷಣ ಮಾಡುವರು. ಕುಂಜಿಲ ಮುರ‍್ರಿಸ್ ನಿಝಾರ್ ಅಹ್ಸನಿ ಕಕ್ಕಿಡಿಪುರಂ ದುಆ ನೇತೃತ್ವ ವಹಿಸುವರು ಎಂದು ತಿಳಿಸಿದರು.

ತಾ.೨೧ರಂದು ಬೆಳಿಗ್ಗೆ ೯ಗಂಟೆಗೆ ಮದ್ರಸ ವಿದ್ಯಾರ್ಥಿಗಳ ಕಲಾ ಸ್ಪರ್ಧೆ ನಡೆಯಲಿದ್ದು, ನಾಪೋಕ್ಲು ಸದರ್ ಮುಅಲ್ಲಿಂ ಹಿದಾಯತುಲ್ ಇಸ್ಲಾಂ ಮದ್ರಸದ ರಫೀಕ್ ಅಹ್ಸನಿ ಉದ್ಘಾಟಿಸುವರು. ಸಂಜೆ ೭ಗಂಟೆಗೆ ಹುಬ್ಬುರಸೂಲ್ ಪ್ರಭಾಷಣ ನಡೆಯಲಿದ್ದು, ನಾಪೋಕ್ಲು ಟೌನ್ ಜಮಾ ಅತ್‌ನ ಮಾಜಿ ಖತೀಬ್ ಶಾದುಲಿ ಸಖಾಫಿ ಉದ್ಘಾಟಿಸುವರು. ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎA. ಅಬೂಬಕರ್ ಅಧ್ಯಕ್ಷತೆ ವಹಿಸುವರು. ಯಹ್ಯ ಬಾಖವಿ ಪುಝಕ್ಕರ ಮುಖ್ಯ ಪ್ರಭಾಷಣ ಮಾಡುವರು. ಮಲೇಶಿಯಾದ ಸಯ್ಯಿದ್ ಅಬ್ದುಲ್ ಅಝಿಝ್ ತಂಙಳ್ ದುಆ ನೇತೃತ್ವ ವಹಿಸುವರು.

ತಾ.೨೨ರಂದು ಮಧ್ಯಾಹ್ನ ೧.೩೦ ಗಂಟೆಗೆ ಮಿಲಾದ್ ಸಂದೇಶ ಜಾಥಾ ನಡೆಯಲಿದೆ. ಹಳೆ ತಾಲೂಕು ಮಸೀದಿ ಆವರಣದಿಂದ ನಾಪೋಕ್ಲು ಪಟ್ಟಣದವರೆಗೆ ಜಾಥಾ ನಡೆಯಲಿದ್ದು, ಸುಮಾರು ೩ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಜಾಥಾದಲ್ಲಿ ಶಾಂತಿ, ಸೌಹಾರ್ದತೆ ಸಾರುವ ಕೀರ್ತನೆಗಳನ್ನು ಮಾತ್ರ ಸಾರಲಾಗುವದು. ಬೇರೆಯವರಿಗೆ ನೋವಾಗುವಂತಹ ಯಾವದೇ ಘೋಷಣೆಗಳನ್ನು ಕೂಗುವದಿಲ್ಲವೆಂದು ಹೇಳಿದರು. ಸಂಜೆ ೪ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲ ಫೈಝಿ ಉದ್ಘಾಟಿಸುವರು. ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉಪಸ್ಥಿತರಿರುವರು. ಸಂಜೆ ೭ಗಂಟೆಗೆ ಮದನೀಯ ಆತ್ಮೀಯ ಮಜ್ಲಿಸ್ ನಡೆಯಲಿದ್ದು, ಅಬ್ದುಲ್ ಲತೀಫ್ ಸಖಾಫಿ ಕಾಂತಪುರA ನೇತೃತ್ವ ವಹಿಸುವರು. ದುಆ ನೇತೃತ್ವ ದುಆ ನೇತೃತ್ವವನ್ನು ಅಲ್ ಮಶ್‌ಹೂರ್ ಆಟಕೋಯ ತಂಙಳ್ ಅಲ್ ಅಝ್‌ಹರಿ ನಿಲಾಮುಟಂ ವಹಿಸುವರೆಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಜಮಾ ಅತ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಅಝೀಝ್, ಸಲೀಂ ಹ್ಯಾರಿಸ್, ಪಿ.ಹೆಚ್. ಹನೀಫ್, ಸಮಾವೇಶದ ಗೌರವ ಅಧ್ಯಕ್ಷ ಕೆ.ಪಿ.ಉಸ್ಮಾನ್, ಕಾರ್ಯದರ್ಶಿ ಸಿ.ಹೆಚ್ ಅಹ್ಮದ್ ಉಪಸ್ಥಿತರಿದ್ದರು.