ರಾಜ್ಯದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ: ಸಿಎಂ
ಬೆಂಗಳೂರು, ಸೆ. ೧೮: ರಾಜ್ಯದಲ್ಲಿ ಮಾದಕ ವಸ್ತು ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕನಿಷ್ಟ ೧೦ ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾಮಾನ ಶಿಕ್ಷೆ ನಿಗದಿ ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿಯಿತ್ತ ಅವರು, ಇಂದು ನಡೆದ ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಕುರಿತ ಸಭೆಯಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತು ಹೆಚ್ಚಿನ ಅರಿವು ಮತ್ತು ನಿಗಾ ವಹಿಸಲು ತಜ್ಞರು ಒತ್ತಾಯಿಸುತ್ತಿದ್ದು, ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಗೃಹ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಮಾಜ ಕಲ್ಯಾಣ, ವೈದ್ಯ ಶಿಕ್ಷಣ ಸಚಿವರು ಸದಸ್ಯರಾಗಿ ಇರಲಿದ್ದುವೀ ತಂಡ ಆಗಾಗ್ಗೆ ಸಭೆ ಸೇರಿ ಮಾದಕ ವಸ್ತು ಪೂರೈಕೆ, ಮಾರಾಟ, ಸೇವನೆ ಪ್ರಕರಣಗಳ ಕುರಿತು ಅವಲೋಕನ ನಡೆಸಲಿದೆ. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದರು.
‘ಒಂದು ರಾಷ್ಟç ಒಂದು ಚುನಾವಣೆ' - ಕೇಂದ್ರ ಸಚಿವ ಸಂಪುಟ ಅನುಮೋದನೆ!
ನವದೆಹಲಿ, ಸೆ. ೧೮: ‘ಒಂದು ರಾಷ್ಟç ಒಂದು ಚುನಾವಣೆ' ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಇದರ ಉದ್ದೇಶ. ಒಂದು ರಾಷ್ಟç ಒಂದು ಚುನಾವಣೆ ಕುರಿತು ವರದಿ ಸಲ್ಲಿಸಲು ಕೇಂದ್ರವು ಮಾಜಿ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಮೂಲಗಳ ಪ್ರಕಾರ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ೭೮ನೇ ಸ್ವಾತಂತ್ರö್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆ ಮೇಲೆ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅವರು ಒಂದು ದೇಶ, ಒಂದು ಚುನಾವಣೆ ಕುರಿತು ಮಾತನಾಡಿದ್ದರು. ಪದೇ ಪದೇ ಚುನಾವಣೆಗಳು ನಡೆಯುವುದರಿಂದ ದೇಶದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಗಣೇಶ ವಿಸರ್ಜನೆ ವೇಳೆ ಚೂರಿ ಇರಿತ-ಮೂವರ ಬಂಧನ
ಬೆಳಗಾವಿ, ಸೆ. ೧೮: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚೂರಿ ಇರಿತದ ನಂತರ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದ ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಂಗಳವಾರ ತಡರಾತ್ರಿ ಮೆರವಣಿಗೆ ಮುಗಿದ ನಂತರ ವಾಪಸ್ಸಾಗುತ್ತಿದ್ದ ಸಂತ್ರಸ್ತರನ್ನು ಬೆನ್ನಟ್ಟಿದ್ದ ಆರೋಪಿಗಳು ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಕುವಿನಿಂದ ಇರಿದಿದ್ದರು. ಬೈಕ್ನಲ್ಲಿ ಪರಾರಿಯಾಗಿದ್ದ ಆರೋಪಿಗಳ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ್ದ ಪೊಲೀಸರು ವಿಶ್ವೇಶ್ವರಯ್ಯ ನಗರದ ಬಳಿ ಬಂಧಿಸಿದ್ದಾರೆ. ಈ ಪ್ರಕರಣ ಸಂಬAಧ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಕುರಿ, ಮಹೇಶ ಮತ್ತು ವಿಜಯ ಎಂದು ಗುರುತಿಸಲಾಗಿದೆ.
ಸಿಎಎಫ್ ಯೋಧನಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; ಇಬ್ಬರು ಸಾವು
ಬಲರಾಮ್ಪುರ, ಸೆ. ೧೮: ಛತ್ತೀಸ್ಗಢದ ಬಲರಾಮ್ಪುರ ಜಿಲ್ಲೆಯ ಛತ್ತೀಸ್ಗಢ ಸಶಸ್ತç ಪಡೆ(ಸಿಎಎಫ್)ಯ ಶಿಬಿರದಲ್ಲಿ ಬುಧವಾರ ಯೋಧನೊಬ್ಬ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ರಾಜ್ಯ ರಾಜಧಾನಿ ರಾಯ್ಪುರದಿಂದ ಸುಮಾರು ೪೦೦ ಕಿ.ಮೀ. ದೂರದಲ್ಲಿರುವ ಸಮ್ರಿಪಥ್ ಪೊಲೀಸ್ ಠಾಣಾ ವ್ಯಾಪ್ತಿಯ ಭೂತಾಹಿ ಮೋಡ್ ಪ್ರದೇಶದಲ್ಲಿ ಸಿಎಎಫ್ನ ೧೧ನೇ ಬೆಟಾಲಿಯನ್ನ ‘ಬಿ' ಕಂಪೆನಿಯ ಶಿಬಿರದಲ್ಲಿ ಇಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ(ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಅವರು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾನ್ಸ್ಟೆಬಲ್ ಅಜಯ್ ಸಿದರ್ ತನ್ನ ಸರ್ವಿಸ್ ರಿವಾಲ್ವರ್ ನಿಂದ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕಾನ್ಸ್ಟೇಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಕಾನ್ಸ್ಟೆಬಲ್ ಸಂದೀಪ್ ಪಾಂಡೆ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಚುನಾವಣೆ
ಶ್ರೀನಗರ, ಸೆ. ೧೮: ದಶಕದ ನಂತರ ಬಿಗಿ ಭದ್ರತೆ ಮಧ್ಯೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಬುಧವಾರ ನಡೆಯಿತು. ಕೇಂದ್ರ ಎನ್ಡಿಎ ಸರ್ಕಾರ ಆಗಸ್ಟ್ ೨೦೧೯ ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ೩೭೦ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಚುನಾವಣೆ ಇದಾಗಿದ್ದರಿಂದ ವಿಶೇಷ ಮಹತ್ವ ಪಡೆದುಕೊಂಡಿತ್ತು. ೨೪ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಕಾಶ್ಮೀರದ ೧೬ ಮತ್ತು ಜಮ್ಮುವಿನ ೮ ಕ್ಷೇತ್ರಗಳಲ್ಲಿ ೨೧೯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು ೩೦೨ ನಗರ ಮತ್ತು ೨,೯೭೪ ಗ್ರಾಮೀಣ ಕೇಂದ್ರಗಳು ಸೇರಿದಂತೆ ೩,೨೭೬ ಮತಗಟ್ಟೆಗಳಲ್ಲಿ ೧೪,೦೦೦ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ವಾಕಿ ಟಾಕಿ-ಪೇಜರ್ ಸ್ಫೋಟ : ೩,೦೦೦ಕ್ಕೂ ಅಧಿಕ ಮಂದಿಗೆ ಗಾಯ
ಲೆಬನನ್, ಸೆ. ೧೮: ಲೆಬನನ್ ದೇಶದಲ್ಲಿ ಆಶ್ರಯ ಪಡೆದಿರುವ ಹಿಜಬುಲ್ಲ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಗುರಿ ಮಾಡಿ ನಡೆದಿದೆ ಎನ್ನಲಾದ ವಾಕಿ-ಟಾಕಿ ಹಾಗೂ ಪೇಜರ್ಗಳ ಸ್ಫೋಟದಿಂದಾಗಿ ದೇಶದ ೩,೦೦೦ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದು ೧೫ ಮಂದಿ ಮೃತರಾಗಿದ್ದಾರೆ. ೨೦೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬಹುತೇಕರು ಹಿಜಬುಲ್ಲ ಉಗ್ರಗಾಮಿ ಸಂಘಟನೆಯವರೇ ಆಗಿದ್ದಾರೆ. ತಾ. ೧೭ ರಂದು ಅಂದಾಜು ಸುಮಾರು ೪,೦೦೦ ಪೇಜರ್ಗಳು ಒಮ್ಮೆಲೆ ದೇಶದ ವಿವಿಧೆಡೆ ಸ್ಫೋಟಗೊಂಡ ಪರಿಣಾಮ ಬಹುತೇಕವಾಗಿ ಅವುಗಳನ್ನು ಬಳಸುತ್ತಿದ್ದ ಹಿಜಬುಲ್ಲ ಉಗ್ರಗಾಮಿಗಳು ಸೇರಿದಂತೆ ಕೆಲ ಸ್ಥಳೀಯರಿಗೂ ಗಾಯವಾಗಿದೆ. ಸುಮಾರು ೧೨ ಮಂದಿ ಪ್ರಾಣ ಕಳೆದುಕೊಂಡರು. ಲೆಬನನ್ನಿನ ಇರಾನಿ ರಾಯಭಾರಿ ಅಧಿಕಾರಿ ಸೇರಿದಂತೆ ಅಂದಾಜು ೩,೦೦೦ ಮಂದಿಗೆ ಹೊಟ್ಟೆ, ತೊಡೆ ಹಾಗೂ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ. ಇದೀಗ ತಾ. ೧೮ ರಂದು ವಾಕಿ-ಟಾಕಿಗಳು ಕೂಡ ಒಂದೇ ಸಮನೆ ಸ್ಫೋಟಗೊಂಡ ಪರಿಣಾಮ ೧೦೦ಕ್ಕೂ ಅಧಿಕ ಮಂದಿಗೆ ಗಾಯವಾಗಿದ್ದಲ್ಲದೆ ೩ ಮಂದಿ ಮೃತರಾಗಿದ್ದಾರೆ. ಹಿಜಬುಲ್ಲ ಉಗ್ರಗಾಮಿ ಸಂಘಟನೆಯ ಸದಸ್ಯರನ್ನೇ ಗುರಿ ಮಾಡಿ ಪೇಜರ್ ಹಾಗೂ ವಾಕಿ-ಟಾಕಿಗಳನ್ನು ಹ್ಯಾಕ್ ಮಾಡಿ ಸ್ಫೋಟಗೊಳಿಸಲಾಗಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಇಸ್ರೇಲ್ ದೇಶದ ಕೈವಾಡ ಇರುವುದಾಗಿ ಹಿಜಬುಲ್ಲ ಸಂಘಟನೆ ಹಾಗೂ ಲೆಬನನ್ ಸರಕಾರ ಆರೋಪಿಸಿದೆ. ಆದರೆ ಇಸ್ರೇಲ್ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.