ಶನಿವಾರಸಂತೆ: ಸಮೀಪದ ಒಡೆಯನಪುರ ಗ್ರಾಮದ ಶ್ರೀಮಂಜುನಾಥ ಯುವಕ ಸಂಘದ ವತಿಯಿಂದ ಶ್ರೀ ಗೌರಿ-ಗಣೇಶ ಪ್ರತಿಷ್ಠಾಪಿಸಲ್ಪಟ್ಟಿದ್ದು ೨೫ ನೇ ವರ್ಷದ ಗೌರಿ-ಗಣೇಶೋತ್ಸವ ಪ್ರಯುಕ್ತ ೧೦ ದಿನಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಹೆಣ್ಣುಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು ೧೧ ಮಂದಿ ಸುಂದರ ರಂಗೋಲಿಗಳನ್ನು ಬಿಡಿಸಿ ನೋಡುಗರ ಗಮನ ಸೆಳೆದರು.
ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನಿವೃತ್ತ ಮುಖ್ಯಶಿಕ್ಷಕ ಸಿ.ಎಲ್.ಸುಬ್ಬಯ್ಯ ಮಾತನಾಡಿ, ಒಡೆಯನಪುರ ಪುಟ್ಟ ಗ್ರಾಮವಾದರೂ ಗ್ರಾಮಸ್ಥರು ಜಾತಿಮತ ಭೇದಭಾವವಿಲ್ಲದೆ ಸೌಹಾರ್ದತೆಯಿಂದ ಬಾಳುತ್ತಿದ್ದು ಕಳೆದ ೨೫ ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಗಣೇಶೋತ್ಸವಕ್ಕೆ ಆದ್ಯತೆ ನೀಡಿದಂತೆ ಗ್ರಾಮಾಭಿವೃದ್ಧಿಯ ಕಡೆಗೂ ಆಸಕ್ತಿ ತೋರಿಸಬೇಕು. ಗ್ರಾಮ ನೈರ್ಮಲ್ಯವಾಗಲೀ, ರಸ್ತೆಯಾಗಲೀ, ಚರಂಡಿಗಳಾಗಲೀ ಸರ್ಕಾರದ ಕೆಲಸವೆಂದು ಕಾಯದೇ ಯುವಕರು ಸ್ವಾವಲಂಭಿಗಳಾಗಿ ಪರಸ್ಪರ ಸಹಕಾರದಿಂದ ಮಾಡಿದರೆ ಗಣೇಶೋತ್ಸವ ಅರ್ಥಪೂರ್ಣವಾಗುತ್ತದೆ ಎಂದರು.
ಸಾಹಿತಿ ಶ.ಗ.ನಯನತಾರಾ ಮಾತನಾಡಿ, ಒಡೆಯನಪುರ ಗ್ರಾಮದಲ್ಲಿ ಗಣೇಶೋತ್ಸವ ಸಾಮರಸ್ಯ ಬೆಸೆಯುವ ಹಬ್ಬವಾಗಿದೆ. ಯುವಕ ಸಂಘದ ಯುವಕರು ಹಾಗೂ ಗ್ರಾಮದ ಹೆಣ್ಣುಮಕ್ಕಳು ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶನನ್ನು ಪೂಜಿಸುವುದು, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಗ್ರಾಮಸ್ಥರ ಐಕ್ಯತೆಗೆ ಕಾರಣವಾಗಿದೆ. ಸ್ಪರ್ಧಾ ಮನೋಭಾವ ಸ್ಪರ್ಧೆಗಷ್ಟೇ ಸೀಮಿತವಾಗಿದ್ದು ಸಾಮರಸ್ಯದಿಂದ ಗ್ರಾಮದಲ್ಲೊಂದು ದೇವಾಲಯ ನಿರ್ಮಿಸಲು ಗಣೇಶೋತ್ಸವ ಕಾರಣವಾಗಲಿ ಎಂದು ಹಾರೈಸಿದರು.
ರಂಗೋಲಿ ಸ್ಪರ್ಧೆಯಲ್ಲಿ ೧೧ ಮಂದಿ ಹೆಣ್ಣುಮಕ್ಕಳು ಭಾಗವಹಿಸಿದ್ದು ಭಾಗ್ಯರಮೇಶ್ ಪ್ರಥಮ ಸ್ಥಾನ, ಗೀತಾ ರಾಜು ದ್ವಿತೀಯ ಸ್ಥಾನ ಹಾಗೂ ಆಶಾ ಶಿವು ತೃತೀಯ ಸ್ಥಾನ ಗಳಿಸಿದ್ದು ವಿಜೇತರಿಗೆ, ಛದ್ಮವೇಶ ಸ್ಪರ್ಧೆ ಮತ್ತು ಇತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಾಗೂ ಭಾಗವಹಿಸಿದವರಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ತೀರ್ಪುಗಾರರಾಗಿ ಶಿಕ್ಷಕಿ ಜ್ಯೋತಿ ನಿರಂಜನ್, ಸಾಹಿತಿ ಶ.ಗ. ನಯನತಾರಾ ಹಾಗೂ ಸುರೇಶ್ ಮೊಗೆರಾ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಸಿ.ಎಲ್. ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಲತೇಶ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಶ್ರೀಜಿತ್, ಖಜಾಂಚಿ ವಿ.ಎಂ.ಯೋಗೇಶ್, ಪತ್ರಕರ್ತ ಸಿ.ಪ್ರಕಾಶ್ಚಂದ್ರ, ಎಂಜಿನಿಯರ್ ನೇಹಾ, ಕಲಾವಿದ ಸುರೇಶ್ ಮೊಗೆರಾ, ಗ್ರಾಮ ಪ್ರಮುಖರು ಹಾಜರಿದ್ದರು. ಸಂಘದ ಸದಸ್ಯ ಒಡೆಯನಪುರ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.ಸಿದ್ದಾಪುರ: ಬಾಡಗ ಬಾಣಂಗಾಲ ಗ್ರಾಮದ ಪ್ಯಾರ್ಲ್ಯಾಂಡ್ ಎಸ್ಟೇಟ್ನಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ತೆರಳಿ ಕಾಫಿ ತೋಟದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಸಮಿತಿಯ ವತಿಯಿಂದ ಒಂದು ವಾರಗಳ ಕಾಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.
ಸುಂಟಿಕೊಪ್ಪ: ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವ ಸ್ಥಾನದಲ್ಲಿ ಪ್ರತಿಷ್ಠಾಪಿಸ ಲಾಗಿದ್ದ ಗೌರಿ ಗಣೇಶ ವಿಸರ್ಜನೆ ವಿಜೃಂಭ ಣೆಯಿಂದ ಭಾನುವಾರ ಸಂಜೆ ನೆರವೇರಿತು.
ವಿಸರ್ಜನೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆ ೭ ಗಂಟೆಯಿAದ ೯ ಗಂಟೆವರೆಗೆ ಪೂಜೆ, ೧೦ ಗಂಟೆಗೆ ಗಣಪತಿ ಹೋಮ, ೧೨.೩೦ ಗಂಟೆಗೆ ಮಹಾಮಂಗಳಾರತಿ ನಡೆಯಿತು. ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ಸಂಗೀತ, ವಿಟ್ಲದ ಗೊಂಬೆ ಕುಣಿತದ ಡೊಳ್ಳಿಗೆ ಯುವಕ- ಯುವತಿಯರು ಕುಣಿದು ಸಂಭ್ರಮಿಸಿದರು.
ಮಹಾಗಣಪತಿ ದೇವಾಲಯದಿಂದ ಆರಂಭಗೊAಡ ಶೋಭಾಯಾತ್ರೆ ಮೆಟ್ನಳ್ಳ ಸರ್ಕಲ್ವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಮುಖ್ಯರಸ್ತೆಯಲ್ಲಿ ಸಾಗಿ ರಾತ್ರಿ ದಾಸಂಡ ರಮೇಶ್ ಚಂಗಪ್ಪ ಅವರ ಜಾಗದಲ್ಲಿ ಸಂಪನ್ನಗೊAಡಿತು. ಅಲ್ಲಿನ ಕೆರೆಯಲ್ಲಿ ವಿದ್ಯುಕ್ತವಾಗಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ದಾಸಂಡ ರಮೇಶ್ ಚಂಗಪ್ಪ, ದಾಸಂಡ ಜಗದೀಶ್, ದಾಸಂಡ ರಂಜನ್, ಮಹೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.
ಮುಂಜಾಗ್ರತಾ ಕ್ರಮವಾಗಿ ಸುಂಟಿಕೊಪ್ಪ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಮಡಿಕೇರಿ: ಮಡಿಕೇರಿಯ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ ವತಿಯಿಂದ ೧೭ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ನೆರವೇರಿಸಲಾಯಿತು. ೭ ದಿನಗಳ ಕಾಲ ಸಮಿತಿ ವತಿಯಿಂದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೆಪ್ಟೆಂಬರ್ ೧೩ ರಂದು ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಸಂಜೆ ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವ ಣಿಗೆ ನಡೆಸಲಾಯಿತು. ಬಳಿಕ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಗೌರಿ ಕೆರೆಯಲ್ಲಿ ಶಾಸ್ತೊçÃಕ್ತವಾಗಿ ಗಣಪತಿಯನ್ನು ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷ ಗೌತಮ್, ಉಪಾಧ್ಯಕ್ಷ ಸಾಗರ್, ಕಾರ್ಯದರ್ಶಿ ಲೀಲೇಶ್, ಖಜಾಂಚಿ ಸಚಿನ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ಮೂರ್ನಾಡು : ಶ್ರೀ ಗಜೇಂದ್ರ ಯುವಶಕ್ತಿ ವತಿಯಿಂದ ಪ್ರತಿಷ್ಠಾಪಿಸಲಾದ ಗೌರಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿAದ ಜರುಗಿತು.
ಪಟ್ಟಣದ ಹನುಮಾನ್ ಟ್ರೇರ್ಸ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ೭ ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಸಂಜೆ ಏರ್ಪಡಿಸಲಾದ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ, ಹನುಮಾನ್ ಟ್ರೇರ್ಸ್ ಮಾಲೀಕ ಪುದಿಯೊಕ್ಕಡ ರಮೇಶ್, ಕಿಗ್ಗಾಲು ಗ್ರಾಮದ ಕಾಫಿ ಬೆಳೆಗಾರ ವಿಫನ್ ಸೋಮಯ್ಯ, ಬಾಡಗ ಗ್ರಾಮದ ಕಾಫಿ ಬೆಳೆಗಾರ ಕಂಬೀರAಡ ಗೌತಮ್ ಆಗಮಿಸಿದರು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರಿಕ್ಷೇಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂರ್ನಾಡು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಬಿ.ಡಿ. ಮೌಲ್ಯ, ಎಂ.ವೈ. ಫರ್ಹಾನ, ಪಿ.ಎಸ್. ಮುಹಮ್ಮದ್ ಸಾಬಿತ್ ಹಾಗೂ ಮೂರ್ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಿ.ಜಿ. ಅನನ್ಯ, ಕೆ.ವಿ. ಪುಣ್ಯಶ್ರೀ ಮತ್ತು ಕೆ.ಎಂ. ಜೂಹಾರ ಅವರಿಗೆ ಕಿರುಕಾಣಿಕೆಯೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮೂರ್ನಾಡು-ಕೋಡಂಬೂರು ಗ್ರಾಮದ ಉರಗತಜ್ಞ ಪ್ರಜ್ವಲ್ ಗೌಡ ಹಾಗೂ ಶಿಕ್ಷಕ ರಂಜಿತ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜೇಂದ್ರ ಯುವಶಕ್ತಿ ಅಧ್ಯಕ್ಷ ಎಂ.ಕೆ. ಸತೀಶ್ ವಹಿಸಿದ್ದರು. ಬಳಿಕ ಟೀಮ್ ಇನೋಟಿವ್ ಬಾಯ್ಸ್ ವತಿಯಿಂದ ಕಲಾಕೃತಿಗಳನ್ನೊಳಗೊಂಡ ಅಲಕೃಂತ ಮಂಟಪದಲ್ಲಿ ಗಣಪತಿಯಿಂದ ಶತಮಹಿಷಿ ಸಂಹಾರ ಪೌರಾಣಿಕ ಕಥಾ ಸಾರಾಂಶದ ಚಲನವಲನ ನೆರೆದವರ ಗಮನ ಸೆಳೆಯಿತು. ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಮುಖ್ಯ ಬೀದಿಯಲ್ಲಿ ಶೋಭಾಯಾತ್ರೆಯಲ್ಲಿ ಮೆರವಣಿಗೆ ಸಾಗಿ ಬಲಮುರಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ಐಗೂರು: ಕಿರಗಂದೂರಿನ ದುರ್ಗಾ ನಗರದಲ್ಲಿ ಪ್ರತಿಷ್ಠಾಪಿಸಲಾದ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಮಂಟಪವು ಗ್ರಾಮ ದೇವತೆಗಳಾದ ಕರಿ ಮಾರಿಯಮ್ಮ ದೇವಸ್ಥಾನ, ಮುತ್ತಪ್ಪ ದೇವಾಲಯ ಮತ್ತು ವಿಜಯನಗರದ ಗುಳಿಗಪ್ಪ ದೇವಾಲಯಕ್ಕೆ ತಲುಪಿತು.
ನಂತರ ಐಗೂರಿನ ಕಬ್ಬಿಣ ಸೇತುವೆಯ ಕೇಂದ್ರ ಸ್ಥಾನಕ್ಕೆ ಸಾಗಿ ಚೋರನ ಹೊಳೆಯಲ್ಲಿ ಮೂರ್ತಿ ವಿಸರ್ಜಿಸಲಾಯಿತು. ರಾತ್ರಿ ವೇಳೆ ಅನ್ನಸಂತರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.