ಮಡಿಕೇರಿ, ಸೆ. ೧೮: ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಶನ್ ಡ್ಯಾನ್ಸ್ ಸ್ಟುಡಿಯೋ ೫ನೇ ವಾರ್ಷಿಕೋತ್ಸವವನ್ನು ಸಂಭ್ರಮ ದಿಂದ ಆಚರಿಸಿಕೊಂಡಿತು.
ಸAಸ್ಥೆಯ ಸ್ಥಾಪಕರು, ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರಾದ ಪ್ರೀತಾ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಜಯಲಕ್ಷಿö್ಮ ಕೆ. ಅವರು ಮನಸ್ಸು ಮತ್ತು ದೇಹದ ಸದೃಢತೆಗೆ ನೃತ್ಯ ಸಹಕಾರಿಯಾಗಿದೆ ಎಂದರು.
ನಿಷ್ಠೆಯೊAದಿಗೆ ಕಠಿಣ ಪರಿಶ್ರಮದಿಂದ ಮಕ್ಕಳು ಹಾಗೂ ಮಹಿಳೆಯರಲ್ಲಿ ಜೀವನೋತ್ಸಾಹ ತುಂಬುತ್ತಿರುವ ಪ್ರೀತಾ ಕೃಷ್ಣ ಅವರ ಸಾಧನೆ ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಂಗ್ಸ್ ಆಫ್ ಫ್ಯಾಶನ್ ಡ್ಯಾನ್ಸ್ ಸ್ಟುಡಿಯೋದ ಸಂಗೀತ ಗುರುಗಳಾದ ಹರಿಚಂದ್ರ ಮಾತನಾಡಿ ಸಂಗೀತದ ಪ್ರಕಾರಗಳ ಬಗ್ಗೆ ವಿವರಿಸಿದರು.
ತುಂಬುತ್ತಿರುವ ಪ್ರೀತಾ ಕೃಷ್ಣ ಅವರ ಸಾಧನೆ ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಂಗ್ಸ್ ಆಫ್ ಫ್ಯಾಶನ್ ಡ್ಯಾನ್ಸ್ ಸ್ಟುಡಿಯೋದ ಸಂಗೀತ ಗುರುಗಳಾದ ಹರಿಚಂದ್ರ ಮಾತನಾಡಿ ಸಂಗೀತದ ಪ್ರಕಾರಗಳ ಬಗ್ಗೆ ವಿವರಿಸಿದರು.ಬಹುಮಾನ ವಿತರಣೆ
“ವೈಟ್ ಲಾಸಿಂಗ್ ಮಂತ್” ಸ್ಪರ್ಧೆಯಲ್ಲಿ ವಿಜೇತರಾದ ಚೇತನಾ ಪೂಜಾರಿ ಹಾಗೂ ಪ್ರತಿಮಾ ಅವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ನೃತ್ಯ ವೈವಿಧ್ಯ
ಸಂಸ್ಥೆಯ ವಿದ್ಯಾರ್ಥಿಗಳು ವಿಭಿನ್ನ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ನೃತ್ಯ ಮಾಡಿದ ಎಲ್ಲಾ ವಿದ್ಯಾರ್ಥಿ ಗಳಿಗೆ ಸಂಸ್ಥೆಯ ಪರವಾಗಿ ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿನಿ ರುಷಿಕಾ ಸ್ವಾಗತಿಸಿ, ನಿರೂಪಿಸಿ, ಪ್ರೀತಾ ಕೃಷ್ಣ ವಂದಿಸಿ ದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಫಿಟ್ನೆಸ್ ತರಬೇತಿಯ ಎಲ್ಲಾ ಮಹಿಳೆಯರು ಉಪಸ್ಥಿತರಿದ್ದರು.