ಮಡಿಕೇರಿ, ಸೆ. ೧೮: ಕೊಡಗು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ೧೦೪ ವರ್ಷದಲ್ಲಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆ ಮಡಿಕೇರಿ ಇವರ ಸಹಯೋಗದಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ಬ್ಯಾಂಕ್‌ನ ಉನ್ನತಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ನಬಾರ್ಡ್ ಮಾಜಿ ಪ್ರಧಾನ ವ್ಯವಸ್ಥಾಪಕ ಮುಂಡAಡ ಸಿ. ನಾಣಯ್ಯ ಅವರು ಉದ್ಘಾಟಿಸಿದರು. ಈ ಸಂದರ್ಭ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ವಿಶಾಲ್ ಕುಮಾರ್, ಡಾ. ಕೃಪಾ, ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾದ ಪೂಳಂಡ ವಿನು ಪೆಮ್ಮಯ್ಯ, ಕಾಂಗಿರ ಸತೀಶ್, ಜಲಜಾ ಶೇಖರ್, ನಾಪಂಡ ಉತ್ತಪ್ಪ, ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ನಾಯಕ್, ಮತ್ತಿತರರು ಹಾಜರಿದ್ದರು.

ಉಚಿತ ನೇತ್ರ ತಪಾಸಣೆಯೊಂದಿಗೆ ನೇತ್ರದಾನ ನೋಂದಣಿ, ಅಭಾ ನೋಂದಣಿಯನ್ನೂ ಮಾಡಿಕೊಳ್ಳಲಾಯಿತು. ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿನ್ನೂ ಈ ಸಂದರ್ಭ ನೀಡಲಾಯಿತು. ಜಿಲ್ಲೆಯ ಹಲವು ಮಂದಿ ಶಿಬಿರದ ಸದುಪಯೋಗಪಡೆದುಕೊಂಡರು.

ಬ್ಯಾAಕ್‌ನ ಅಧ್ಯಕ್ಷ ಬಾಂಡ್ ಗಣಪತಿ, ಉಪಾಧ್ಯಕ್ಷ ಹರೀಶ್ ಪೂವಯ್ಯ ಹಾಗೂ ತಂಡದ ಆಸಕ್ತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.