ಬೆಂಗಳೂರು, ಸೆ. ೧೮: ೨೦೧೯ರ ಏಪ್ರಿಲ್ ೧ಕ್ಕಿಂತ ಮೊದಲು ಹಿಂದೆ ರಾಜ್ಯದಲ್ಲಿ ನೋಂದಣಿಯಾದ ವಾಹನಗಳಿಗೆ ನೂತನ ತಂತ್ರಜ್ಞಾನದ ಹೆಚ್.ಎಸ್.ಆರ್.ಪಿ ನೋಂದಣಿ ಫಲಕವನ್ನು ಅಳವಡಿಸಲು ಮತ್ತೇ ೨ ತಿಂಗಳವರೆಗೆ ಕಾಲಾವಕಾಶ ದೊರೆತಿದೆ. ಹೊಸ ನಂಬರ್ ಪ್ಲೇಟ್ಗಳ ಅಳವಡಿಕೆಗೆ ನೀಡಿದ್ದ ಸೆಪ್ಟೆಂಬರ್ ೧೫ರ ಗಡುವನ್ನು ಮತ್ತೇ ವಿಸ್ತರಿಸಬೇಕೆಂದು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯವು, ಅರ್ಜಿ ವಿಚಾರಣೆಯನ್ನು ನವೆಂಬರ್ ೨೦ಕ್ಕೆ ಮುಂದೂಡಿದೆ. ಹಾಗೂ ಅಂದಿನವರೆಗೂ ಈ ನಂಬರ್ ಪ್ಲೇಟ್ ರಹಿತ ವಾಹನಗಳಿಗೆ ಯಾವುದೇ ರೀತಿಯ ದಂಡ ವಿಧಿಸಬಾರದೆಂದು ಆದೇಶದಲ್ಲಿ ತಿಳಿಸಿದೆ.
ನೂತನ ನಂಬರ್ ಪ್ಲೇಟ್ ಅಳವಡಿಕೆಗೆ ೨೦೨೩ರ ನವೆಂಬರ್, ೨೦೨೪ರ ಫೆಬ್ರವರಿ ಹಾಗೂ ನಂತರದಲ್ಲಿ ೨೦೨೪ರ ಮೇ ತಿಂಗಳಿಗೆ ಡೆಡ್ಲೈನ್ಅನ್ನು ಮುಂದೂಡುತ್ತಾ ಬರಲಾಗಿದ್ದು, ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಕೇವಲ ಶೇ.೧೯ ರಷ್ಟು ವಾಹನಗಳು ಮಾತ್ರ ಹೆಚ್.ಎಸ್.ಆರ್.ಪಿ ಅಡಿ ನೋಂದಣಿಯಾಗಿದ್ದರಿAದ ಸೆಪ್ಟೆಂಬರ್ವರೆಗೆ ಈ ‘ಡೆಡ್ಲೈನ್’ಅನ್ನು ಹೆಚ್.ಎಸ್.ಆರ್.ಪಿ ತಯಾರಿಕಾ ಸಂಸ್ಥೆಯ ಮನವಿ ಮೇರೆಗೆ ಮುಂದೂಡಲಾಗಿತ್ತು. ಈ ಅವಧಿ ಮುಗಿದಿದ್ದು, ಪ್ರಸ್ತುತ ವಾರದಿಂದಲೇ ನೂತನ ನೋಂದಣಿ ಫಲಕ ರಹಿತ ವಾಹನಗಳಿಗೆ ದಂಡ ವಿಧಿಸಲು ರಾಜ್ಯ ಸಾರಿಗೆ ಇಲಾಖೆ ಸಜ್ಜಾಗುತ್ತಿತ್ತು.
(ಮೊದಲ ಪುಟದಿಂದ) ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಕೂಡ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂಬುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ರೂ.೫೦೦ರಿಂದ ೧,೦೦೦ದವರೆಗೂ ದಂಡ ವಿಧಿಸುವ ಚಿಂತನೆಯನ್ನು ಸಾರಿಗೆ ಇಲಾಖೆ ನಡೆಸಿತ್ತು. ಆದರೆ ಇದೀಗ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದರಿಂದ, ಈ ಸಂಬAಧ ವಿಚಾರಣೆಯು ನವೆಂಬರ್ ೨೦ಕ್ಕೆ ಮೂಂದೂಡಿರುವುದರಿAದ ಅಂದಿನವರೆಗೂ ದಂಡ ವಿಧಿಸಲಾಗುವುದಿಲ್ಲ. ರಾಜ್ಯದಲ್ಲಿ ಸುಮಾರು ೫೫ ಲಕ್ಷ ವಾಹನಗಳು ಮಾತ್ರ(೨೦೧೯ರ ಹಿಂದೆ ನೋಂದಣಿಯಾದ) ಹೆಚ್.ಎಸ್.ಆರ್.ಪಿ ಅಳವಡಿಸಿದ್ದು, ಇನ್ನೂ ಸುಮಾರು ೧.೪೫ ಕೋಟಿ ವಾಹನಗಳು ಬಾಕಿಯಿವೆ ಎಂದು ಅಂದಾಜಿಸಲಾಗಿದೆ.