ಕಣಿವೆ, ಸೆ. ೧೮: ಹಾಲು ಉತ್ಪಾದಕರ ಸಂಘಗಳಿAದಾಗಿ ಗ್ರಾಮೀಣ ಪ್ರದೇಶಗಳ ಅನೇಕ ಮನೆಗಳು ಬೆಳಗುತ್ತಿವೆ ಎಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತಕುಮಾರ್ ಹೇಳಿದರು.
ಮದಲಾಪುರದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಹೈನುಗಾರಿಕೆಗೆ ಮೊದಲ ಆದ್ಯತೆ ನೀಡಬೇಕು. ಹಾಲು ಉತ್ಪಾದಕ ಸಂಘಕ್ಕೆ ಹೆಚ್ಚು ಹಾಲು ಹಾಕುವ ಮೂಲಕ ಸಂಘದೊAದಿಗೆ ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕೆAದು ಹೇಳಿದರು.
ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಎಸ್.ಆರ್. ಸುನಿಲ್ರಾವ್ ಮಾತನಾಡಿ, ಹಿಂದಿನವರು ಬಹಳ ದೂರದೃಷ್ಟಿಯನ್ನು ಇಟ್ಟುಕೊಂಡು ಆರಂಭಿಸಿರುವ ಮದಲಾಪುರದ ಹಾಲು ಉತ್ಪಾದಕ ಸಂಘವನ್ನು ಅಭಿವೃದ್ಧಿ ಪಡಿಸಲು ಸಂಘದ ವ್ಯಾಪ್ತಿಯ ಎಲ್ಲಾ ರೈತರು ತಪ್ಪದೇ ನಮ್ಮ ಸಂಘಕ್ಕೆ ಹಾಲು ಹಾಕಬೇಕೆಂದು ಮನವಿ ಮಾಡಿದರು. ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಸಂಘದ ಬೈಲಾದ ಪ್ರಕಾರ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆ ಸಂಘಗಳಿಗೆ ಹಾಲು ಹಾಕುವಂತಿಲ್ಲ. ಆದಾಗ್ಯೂ ಮದಲಾಪುರ ವ್ಯಾಪ್ತಿಯ ಹೈನು ಕೃಷಿಕರು ಸಂಘದ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಈ ಸಂಘಕ್ಕೆ ಹಾಲನ್ನು ಹಾಕಬೇಕೆಂದು ಕೋರಿದರು.
ಅತೀ ಹೆಚ್ಚು ಹಾಲು ಹಾಕಿದ ತಮ್ಮಯ್ಯ, ಸುರೇಶ್, ದೇವೀರಮ್ಮ, ಕೃಷ್ಣ ಹಾಗೂ ವೆಂಕಟಯ್ಯನಾಯಕ ಅವರಿಗೆ ಮಹಾಸಭೆಯಲ್ಲಿ ಬಹುಮಾನ ನೀಡಲಾಯಿತು. ಸಂಘದ ಉಪಾಧ್ಯಕ್ಷ ಪುಟ್ಟಣ್ಣಯ್ಯ, ನಿರ್ದೇಶಕರಾದ ದೇವೀರಮ್ಮ, ತಮ್ಮಯ್ಯ, ದೇವರಾಜು, ಸುರೇಶ ಇದ್ದರು. ಕಾರ್ಯದರ್ಶಿ ಎಂ.ಎನ್. ಯೋಗೇಶ ಸ್ವಾಗತಿಸಿದರು.