ಮಡಿಕೇರಿ, ಸೆ. ೧೮: ವಿಶ್ವದ ಕಾಫಿ ಉತ್ಪಾದನೆಯಲ್ಲಿ ಶೇ. ೬೦ರಷ್ಟು ಕೊಡುಗೆÀ ಇರುವ ಬ್ರೆಜಿಲ್ ಶೇ. ೨೦ರಷ್ಟು ಸ್ಥಾನ ಪಡೆದಿರುವ ವಿಯೆಟ್ನಾಂ ನಂತಹ ಪ್ರದೇಶದಲ್ಲಿ ಪ್ರಸ್ತುತ ವಾತಾವರಣದ ಏರುಪೇರು ಅಲ್ಲಿನ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಅಲ್ಲಿ ಪ್ರಸ್ತುತ ಕಾಫಿ ಹೂ ಬಿಡುವ ಸಮಯ ಇದಾಗಿದ್ದು ಮಳೆಯನ್ನೇ ಕಾಣದೆ ಬರದಂತಹ ಸನ್ನಿವೇಶವಿರುವುದರಿಂದ ಕಾಫಿ ಗಿಡಗಳು ಬಿಸಿಲಿನ ಪ್ರಖರತೆಯಿಂದ ಸುಟ್ಟು ಕರಕಲಾಗುತ್ತಿದೆ ಎನ್ನಲಾಗಿದೆ. ಕಾಫಿ ಮೊಗ್ಗು ಗಿಡದಲ್ಲೇ ಸುಟ್ಟುಹೋಗುತ್ತಿದ್ದು, ಇದು ಮುಂದಿನ ಫಸಲಿಗೆ ಭಾರೀ ಹೊಡೆತವಾಗಲಿದೆ ಎಂದು ಅಲ್ಲಿನ ವಿದ್ಯಮಾನದಿಂದಾಗಿ ಹೊರಜಗತ್ತಿಗೆ ಅರಿವಾಗುತ್ತಿದೆ.
ಬ್ರೆಜಿಲ್ನಲ್ಲಿ ಕಾಫಿ ಹೂ ಬಿಡಬೇಕಾದ ಈ ಸಮಯದಲ್ಲಿ ತೀವ್ರ ಬರದ ಪರಿಸ್ಥಿತಿ, ಇದರಿಂದಾಗಿ ಉಷ್ಣಾಂಶದಲ್ಲಿ ಭಾರೀ ಏರಿಕೆ ಇರುವುದು, ಇದರೊಂದಿಗೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಆತಂಕದಿAದಾಗಿ ಮಣ್ಣಿನ ತೇವಾಂಶ ತೀರಾ ಕಡಿಮೆಯಾಗಿದೆ ಎನ್ನಲಾಗಿದ್ದು, ಇದು ಮುಂದಿನ ಫಸಲಿಗೆ ಭಾರೀ ಪೆಟ್ಟುಬಿದ್ದಂತಾಗಿದೆ.
ವಿಶ್ವದಲ್ಲಿ ಬ್ರೆಜಿಲ್ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಷ್ಟçವಾಗಿದ್ದು ಇಲ್ಲಿ ಕಾಫಿ ಫಸಲು ಕಡಿಮೆಯಾಗುವ ಅಂದಾಜಿನ ಹಿನ್ನೆಲೆ ಮುಂದಿನ ಒಂದೆರಡು ವರ್ಷ ಭಾರತದ ಕಾಫಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತದ ಉತ್ಪಾದನೆ ವಿಶ್ವದಲ್ಲಿ ಶೇ. ೪ರಷ್ಟು ಮಾತ್ರ ಎಂಬುದನ್ನೂ ಇಲ್ಲಿನ ಬೆಳೆಗಾರರು ಅರ್ಥೈಸಿಕೊಳ್ಳಬೇಕಾಗಿದೆ. ಈತನಕ ಬ್ರೆಜಿಲ್ನಲ್ಲಿ ಮಳೆಯೇ ಆಗಿಲ್ಲ. ಇದರೊಂದಿಗೆ ಒಂದು ವೇಳೆ ಕೇವಲ ಸಣ್ಣ ಪ್ರಮಾಣದ ಮಳೆ ಬಿದ್ದರೂ ಇದರಿಂದ ಈಗಾಗಲೇ ಮುಂದುವರಿದಿರುವ ಕಾಫಿ ಮೊಗ್ಗು ಮತ್ತಷ್ಟು ಹಾಳಾಗುವ ಸಾಧ್ಯತೆ ಹೆಚ್ಚಿದೆ ಎಂಬದಾಗಿ ಬ್ರೆಜಿಲ್ನಲ್ಲಿರುವ ಕೊಡಗಿನ ವ್ಯಕ್ತಿಯಾದ ಹಾಗೂ ಅಲ್ಲಿನ ಕಾಫಿ ಬೆಳೆಯ ಬಗ್ಗೆ ಹೆಚ್ಚು ಅನುಭವವನ್ನು ಹೊಂದಿರುವ ಮರುವಂಡ ಮನು ಮೇದಪ್ಪ ಅವರು ‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊAಡಿದ್ದಾರೆ. ಕಾಫಿ ಉತ್ಪಾದನೆ ಇಳಿಮುಖವಾಗುವ ಸಾಧ್ಯತೆಯಿರುವುದರಿಂದ ವಿಶ್ವ ಮಾರುಕಟ್ಟೆಯಲ್ಲಿ ಮುಂದಿನ ಒಂದೆರಡು ವರ್ಷ ಬೇಡಿಕೆ ಹೆಚ್ಚಾಗಲಿದ್ದು, ಬೆಲೆ ಒಂದಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂಬದು ಈಗಿನ ಅಂದಾಜು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಭಾರತೀಯ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಅವರು ಭಾರತೀಯ ಕಾಫಿಗೆ ಮುಂದಿನ ಕೆಲ ವರ್ಷ ಉತ್ತಮ ಬೆಲೆಯೊಂದಿಗೆ ಭವಿಷ್ಯಕ್ಕೆ ಪೂರಕ ಪರಿಸ್ಥಿತಿ ಇದೆಯಾದರೂ ಇಲ್ಲಿನ ಬೆಳೆಗಾರರು ಮುಂದಾಲೋಚನೆಯಿAದ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ಬ್ರೆಜಿಲ್ನ ಉತ್ಪಾದನೆ ವಿಶ್ವದಲ್ಲಿ ಶೇ. ೬೦ರಷ್ಟಿದೆ. ಅದೇ ಭಾರತದ ಕೊಡುಗೆ ಇರುವುದು ಶೇ. ೪ರಷು ಮಾತ್ರ. ಶೇ. ೬೦ರಷ್ಟು ಉತ್ಪಾದನೆ ಎಂದರೆ ಆ ರಾಷ್ಟçದಲ್ಲಿ ಭಾರೀ ಪ್ರಮಾಣದ ಜಾಗದಲ್ಲಿ ಕಾಫಿ ಬೆಳೆಯಿರುತ್ತದೆ. ವಾತಾವರಣದ ಏರುಪೇರು ಇಡೀ ರಾಷ್ಟç ವ್ಯಾಪಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಯೂ ಆಗಬಹುದು. ನೀರಿನ ಸೌಲಭ್ಯವೂ ಇರುವ ಅವಕಾಶಗಳಿವೆ. ಇದರಿಂದಾಗಿ ಎಲ್ಲೆಡೆ ಕಾಫಿ ಫಸಲು ಹಾನಿಯಾಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಆ ರಾಷ್ಟç ಶೀಘ್ರಗತಿಯಲ್ಲಿ ಚೇತರಿಕೆಯನ್ನೂ ಕಂಡುಕೊಳ್ಳಲಿದೆ. ಇದರಿಂದಾಗಿ ಭಾರತದ ಬೆಳೆಗಾರರು ವಿಶೇಷವಾಗಿ ಕೊಡಗಿನವರು ಭವಿಷ್ಯದ ಬಗ್ಗೆ ಜಾಗೃತೆಯಿಂದ ಇರಬೇಕು. ಪ್ರಸ್ತುತ ಇರುವ ಧಾರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ನಂಬಲು ಸಾಧ್ಯವಿಲ್ಲ.
(ಮೊದಲ ಪುಟದಿಂದ) ಅಲ್ಲಿನ ಕಾಫಿ ಮತ್ತೆ ಮುನ್ನೆಲೆಗೆ ಬಂದರೆ ಇಲ್ಲಿ ದರ ಕಡಿಮೆಯಾಗುವ ಸಾಧ್ಯತೆಯಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮಲ್ಲಿ ಒಮ್ಮೆ ಹೆಚ್ಚಾಗುವ ಉತ್ಪಾದನಾ ವೆಚ್ಚ, ಕಾರ್ಮಿಕರ ವೇತನ ಇನ್ನಿತರ ಖರ್ಚುಗಳು ಯಥಾ ಪ್ರಕಾರವೇ ಮುಂದುವರಿದುಕೊAಡು ಹೋಗುತ್ತದೆ. ಇದನ್ನೂ ಬೆಳೆಗಾರರು ಮನನ ಮಾಡಿಕೊಳ್ಳಬೇಕು ಎಂಬದು ಬೋಸ್ ಮಂದಣ್ಣ ಅವರ ಅನುಭವದ ಮಾತಾಗಿದೆ.
ವಹಿವಾಟಿನ ಮತ್ತೊಂದು ವಿಚಾರದ ಬಗ್ಗೆಯೂ ಅವರು ಉಲ್ಲೇಖಿಸಿದರು. ಸಾಧಾರಣವಾಗಿ ಬೆಳೆಗಾರರು ಕಾಫಿ ಉತ್ಪಾದನೆ ಕಡಿಮೆಯಿದೆ ಎಂದರೂ ಖರೀದಿಸುವ ಕೆಲವು ಪ್ರಮುಖ ರಾಷ್ಟಿçÃಗಳು ಇದನ್ನು ಅಲ್ಲಗಳೆಯುವಂತೆ ಪ್ರತಿಬಿಂಬಿಸಿ ಎಲ್ಲೆಡೆ ಕಾಫಿ ಫಸಲು ಉತ್ತಮವಾಗಿದೆ ಎನ್ನುತ್ತವೆ. ಏಕೆಂದರೆ ಫಸಲು ಕಡಿಮೆ ಎಂದರೆ ಬೇಡಿಕೆ ಹೆಚ್ಚಾಗಿ ಬೆಲೆ ಅಧಿಕವಾಗುವುದನ್ನು ತಪ್ಪಿಸುವ ಪ್ರಯತ್ನವೂ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಕಾಫಿಗೆ ಸ್ಥಿರ ಧಾರಣೆ ಸಿಗಬೇಕಾದರೆ ಹೆಚ್ಚಿನ ಜನಸಂಖ್ಯೆಯಿರುವ ಭಾರತದಲ್ಲಿ ಆಂತರಿಕ ಬಳಕೆ ಹೆಚ್ಚಾಗಬೇಕು. ಪ್ರಸ್ತುತ ದೇಶದಲ್ಲಿ ಆಂತರಿಕ ಬಳಕೆ ಶೇ. ೨೦ರಷ್ಟು ಮಾತ್ರ ಇದೆ. ಶೇ. ೮೦ರಷ್ಟು ರಫ್ತಾಗುತ್ತಿದೆ. ಆಂತರಿಕ ಬಳಕೆ ಹೆಚ್ಚಾದಲ್ಲಿ ಬೆಲೆಯಲ್ಲಿ ಸ್ಥಿರತೆ ಕಾಣಬಹುದು ಎಂದು ಅವರು ಹೇಳಿದರು.
ಪ್ರಸಕ್ತÀ ಪರಿಸ್ಥಿತಿಯ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿರುವ ಮತ್ತೋರ್ವ ಬೆಳೆಗಾರ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಕೆ.ಕೆ. ವಿಶ್ವನಾಥ್ ಅವರು ಕಳೆದ ಕೆಲವು ವರ್ಷಗಳಿಂದ ವಿಶ್ವವ್ಯಾಪಿಯಾಗಿ ಕಾಫಿ ಬೆಳೆಯುವ ರಾಷ್ಟçಗಳಲ್ಲಿ ಹವಾಮಾನದಲ್ಲಿ ಏರಿಳಿತ ಕಂಡುಬರುತ್ತಿರುವುದರಿAದ ಬೆಳೆಗಾರರು ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ. ಯಾವುದನ್ನೂ ನಿಖರವಾಗಿ ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಸದ್ಯದ ವಿದ್ಯಮಾನದಂತೆ ಬ್ರೆಜಿಲ್ನಂತಹ ಪ್ರಮುಖ ಕಾಫಿ ಉತ್ಪಾದಿಸುವ ರಾಷ್ಟçದಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇರುವುದು ವರದಿಯಾಗಿದ್ದು, ಇದು ಭಾರತದ ಕಾಫಿಗೆ ಒಂದಷ್ಟು ಬೇಡಿಕೆ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದ ಎನ್ನಲಾಗುತ್ತಿದ್ದರೂ ಕಾಫಿ ಮಾರುಕಟ್ಟೆಗೆ ಬರುವ ವೇಳೆಗೆ ವ್ಯತ್ಯಾಸವಾಗಲೂಬಹುದು. ಆದರೆ ಮುಂದಿನ ಫಸಲು ಮಾರುಕಟ್ಟೆಗೆ ಬಂದಾಗ ಈಗಿನ ಧಾರಣೆ ಸಿಗಬಹುದು ಎಂಬ ಆಶಾಭಾವನೆ ಇದೆ. ಬೆಳೆಗಾರರು ಭವಿಷ್ಯದ ಬಗ್ಗೆ ಮುಂದಾಲೋಚಿಸಿ ಹಿಡಿತದಲ್ಲಿ ನಡೆದುಕೊಳ್ಳುವುದು ಸೂಕ್ತ. ಅಲ್ಲದೆ ತಮ್ಮ ತೋಟಗಳಲ್ಲಿ ಮೂಲಭೂತ ಅಗತ್ಯತೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಖರ್ಚು ವೆಚ್ಚದಲ್ಲಿ ನಿಯಂತ್ರಣ ಹೊಂದಿದ್ದರೆ ಮಾತ್ರ ಭವಿಷ್ಯಕ್ಕೆ ಪ್ರಯೋಜನ ಎಂಬುದನ್ನು ಬೆಳೆಗಾರರು ಮರೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಫಿ ಉದ್ಯಮದ ಕುರಿತು ಅನುಭವ ಹೊಂದಿರುವ ಹರೀಶ್ ಅವರು ಪ್ರತಿಕ್ರಿಯಿಸಿದ್ದು, ವಿಶ್ವದಲ್ಲಿ ಪ್ರಮುಖ ಕಾಫಿ ಉತ್ಪಾದಿಸುವ ರಾಷ್ಟçಗಳಾದ ಬ್ರೆಜಿಲ್, ವಿಯೆಟ್ನಾಂನಲ್ಲಿ ಕೆಲವೊಂದು ವ್ಯತಿರಿಕ್ತ ಪರಿಣಾಮ ಆಗಿರುವುದು ವರದಿಯಾಗಿದೆ. ಆದರೆ ಈ ರಾಷ್ಟçಗಳು ಶೀಘ್ರಗತಿಯಲ್ಲಿ ಚೇತರಿಕೆ ಪಡೆದುಕೊಳ್ಳವುದರಲ್ಲಿ ಸÀಂಶಯವಿಲ್ಲ. ಸದ್ಯದ ಮಟ್ಟಿಗೆ ಭಾರತದ ಕಾಫಿಗೆ ಉತ್ತಮ ಬೆಲೆ ಎನ್ನುವುದಕ್ಕಿಂತ ಒಂದಷ್ಟು ಬೇಡಿಕೆ ಹೆಚ್ಚು ಇರುವ ಸಾಧ್ಯತೆಯಿದೆ. ಆದರೆ ಈಗಿನ ಪರಿಸ್ಥಿತಿಯೇ ಮುಂದುವರಿಯಲಿದೆ ಎಂಬ ನಂಬಿಕೆಯಿAದ ಸ್ಥಳೀಯ ಬೆಳೆಗಾರರು ಹೊರತಾಗಿರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.