ಸೋಮವಾರಪೇಟೆ, ಸೆ. ೧೮: ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರಿಂದಾಗಿ ಭಾರತಕ್ಕೆ ವಿಶ್ವದಲ್ಲಿಯೇ ಮನ್ನಣೆ ಸಿಗುತ್ತಿದೆ. ಇದು ಭಾರತೀಯರಿಗೂ ಹೆಮ್ಮೆ ತಂದಿದೆ ಎಂದು ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೋದಿ ಅವರಿಂದಾಗಿ ಭಾರತದ ಅಭಿವೃದ್ಧಿಯ ಪಥಕ್ಕೆ ವೇಗ ಸಿಕ್ಕಿದೆ. ಅಂತರರಾಷ್ಟಿçÃಯ ಮಟ್ಟದಲ್ಲೂ ದೇಶದ ಖ್ಯಾತಿ ಹೆಚ್ಚಿದೆ ಎಂದರು.
ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ವಿಕಸಿತ ಭಾರತದ ಪರಿಕಲ್ಪನೆಯೊಂದಿಗೆ ಆಡಳಿತ ನಡಸುತ್ತಿರುವ ಮೋದಿ ಅವರು, ದೇಶದ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ. ಪಾರದರ್ಶಕ ಆಡಳಿತದಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಣ್ಣುಹಂಪಲು ವಿತರಣೆ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯ ಬಿ.ಆರ್. ಮೃತ್ಯುಂಜಯ, ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಪದಾಧಿಕಾರಿಗಳಾದ ಕಿಬ್ಬೆಟ್ಟ ಆನಂದ, ನೇಗಳ್ಳೆ ಜೀವನ್, ಪ್ರದೀಪ್, ಸೂರ್ಯ, ಆನಂದ್, ರಕ್ಷಿತ್, ಕೃಷ್ಣ, ರಂಜಿತ್, ಕಿಬ್ಬೆಟ್ಟ ಅಭಿ, ಸ್ವರೂಪ್, ವಿಜಯ್, ಪಾಲಾಕ್ಷ, ಆಸ್ಪತ್ರೆಯ ವೈದ್ಯರಾದ ಯಶಸ್ ಗಾಂಧಿ ಸೇರಿದಂತೆ ಇತರರು ಇದ್ದರು.