ವೀರಾಜಪೇಟೆ, ಸೆ. ೧೮: ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿರುವ ಸಂತ ಫಾತಿಮಾ ದೇವಾಲಯದಲ್ಲಿ ಮೇರಿ ಮಾತೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಪೂಜೆಯ ಬಳಿಕ ಗ್ರಾಮದ ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಿವೃತ್ತಿ ಹೊಂದಿದ ಶಿಕ್ಷಕರಾದ ಟ್ರಸಿಲ್ಲ ಡಿಸೋಜಾ, ವಿಕ್ಕಿ ಡಿಮೆಲ್ಲೋ ಮತ್ತು ಲಿಲ್ಲಿ ಡಿಸೋಜಾ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದೇವಾಲಯದ ಗುರುಗಳಾದ ವಂದನೀಯ ಗುರು ವಿಲ್ಫೆçಡ್ ಹಾಗೂ ಮಾನುವೆಲ್ ಡಿಸೋಜಾ ಸನ್ಮಾನಿತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.