ಸೋಮವಾರಪೇಟೆ, ಸೆ. ೧೮: ಮನುಷ್ಯನ ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲ. ಆದ್ದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸುವ ಕೆಲಸ ಮಾಡಬೇಕೆಂದು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಹೇಳಿದರು.

ಇಲ್ಲಿನ ಜಲಾಲಿಯಾ ಮಸ್ಜಿದ್ ಈದ್ ಮಿಲಾದ್ ಕಮಿಟಿಯ ಆಶ್ರಯದಲ್ಲಿ, ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಮಸೀದಿ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತಹೀನತೆ, ರಕ್ತದ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ರೋಗಿಗಳು ಬಳಲುತ್ತಿದ್ದು, ಎಲ್ಲರಿಗೂ ರಕ್ತದ ಅವಶ್ಯಕತೆಯಿದೆ. ಆದರೆ ರಕ್ತವನ್ನು ದಾನಿಗಳಿಂದ ಮಾತ್ರ ಪಡೆಯಲು ಸಾಧ್ಯ. ಆದ್ದರಿಂದ ರಕ್ತದಾನಿಗಳು ಸ್ವಯಂಪ್ರೇರಣೆಯಿAದ ರಕ್ತದಾನಕ್ಕೆ ಮುಂದಾಗಬೇಕೆAದು ಕರುಂಬಯ್ಯ ಅವರು ಕರೆ ನೀಡಿದರು.

ಆರೋಗ್ಯವಂತರು ೩ ರಿಂದ ೪ ತಿಂಗಳಿಗೊಮ್ಮೆ ೬೫ ವರ್ಷಗಳವರೆಗೆ ನಿಯಮಿತವಾಗಿ ರಕ್ತದಾನ ಮಾಡಬಹುದು. ಯುವಜನಾಂಗ ಈ ಬಗ್ಗೆ ಜಾಗೃತಿಗೊಂಡು ರಕ್ತದಾನಕ್ಕೆ ಮುಂದಾಗಬೇಕು. ಹಲವಷ್ಟು ಮಂದಿ ತಪ್ಪು ಕಲ್ಪನೆಯಿಂದ ಮುಂದೆ ಬರುತ್ತಿಲ್ಲ. ರಕ್ತದಾನದಿಂದ ಹೃದಯಾಘಾತಗಳು ಕಡಿಮೆಯಾಗುತ್ತವೆ. ಬಿ.ಪಿ., ಶುಗರ್ ಹತೋಟಿಯಲ್ಲಿರುತ್ತದೆ. ಕ್ಯಾನ್ಸರ್ ತಟೆಗಟ್ಟುವಲ್ಲೂ ರಕ್ತದಾನ ಸಹಕಾರಿ ಎಂದು ಸಂಶೋಧನೆಗಳಿAದ ತಿಳಿದುಬಂದಿದೆ ಎಂದು ಮನವರಿಕೆ ಮಾಡಿದರು.

ಜಿಲ್ಲೆಯಲ್ಲಿ ಇಂದಿಗೂ ಡೆಂಗ್ಯೂ ನಿಯಂತ್ರಣಕ್ಕೆ ಬಂದಿಲ್ಲ. ಈ ರೋಗಿಗಳಿಗೆ ರಕ್ತ ಹಾಗೂ ಪ್ಲೇಟ್‌ಲೆಟ್ಸ್ ಹೆಚ್ಚು ಅವಶ್ಯಕತೆಯಿದೆ. ರಕ್ತನಿಧಿ ಕೇಂದ್ರದಲ್ಲಿ ರಕ್ತಕ್ಕೆ ಬೇಡಿಕೆಯೂ ಹೆಚ್ಚಿದೆ. ಆದ್ದರಿಂದ ಇಂತಹ ಶಿಬಿರಗಳು ಹೆಚ್ಚು ಆಯೋಜನೆಗೊಳ್ಳಬೇಕೆಂದು ಮನವಿ ಮಾಡಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ಜಮೀರ್ ಅಹ್ಮದ್ ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದಾನದ ಮಾದರಿಯಲ್ಲಿ ಅಂಗಾAಗ ದಾನಕ್ಕೂ ಸಮಾಜದಲ್ಲಿ ಜಾಗೃತಿ ಮೂಡಬೇಕು. ನಮ್ಮಿಂದ ಮತ್ತೊಂದು ಜೀವ ಉಳಿದರೆ ದೇವರ ಅನುಗ್ರಹ ಲಭಿಸುತ್ತದೆ. ಎಲ್ಲಾ ಮಸೀದಿಗಳಲ್ಲಿಯೂ ಇಂತಹ ಶಿಬಿರಗಳನ್ನು ಆಯೋಜಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಲಾಲಿಯಾ ಮಸೀದಿ ಧರ್ಮಗುರು ಹಮೀದ್ ಸಖಾಫಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.