ಮಡಿಕೇರಿ, ಸೆ. ೧೮ : ಮಡಿಕೇರಿಯ ಮಿಲಿಟರಿ ಕ್ಯಾಂಟೀನ್ನಲ್ಲಿ ಸಾಮಗ್ರಿ ಖರೀದಿಗೆ ಆಗಮಿಸಿದ್ದ ಮಹಿಳೆಯೋರ್ವರು ತಮ್ಮ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದು ಇದು ಕ್ಯಾಂಟೀನ್ ಸಿಬ್ಬಂದಿಗೆ ದೊರೆತಿತ್ತು. ಇದನ್ನು ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸಿಬ್ಬಂದಿ ತಲುಪಿಸಿದ್ದು ಸರ ಕಳೆದುಕೊಂಡವರು ನಾಪೋಕ್ಲು ಹಳೇ ತಾಲೂಕಿನ ಮಹಿಳೆ ರಾಧ ಎಂಬವರೆAದು ತಿಳಿದು ಬಂದಿದ್ದು ಬಳಿಕ ಅವರನ್ನು ಕರೆಸಿ ಸರವನ್ನು ಹಸ್ತಾಂತರಿಸಲಾಯಿತು.