ಮಡಿಕೇರಿ, ಸೆ. ೧೬ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅಕ್ಟೋಬರ್ ೫ ರಂದು ನಗರದ ಗಾಂಧಿ ಮೈದಾನದಲ್ಲಿ ೧೧ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ಅ. ೫ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಗಾಂಧಿ ಮೈದಾನದಲ್ಲಿ ಪ್ರಾರಂಭವಾಗಲಿದೆ.
ಮಕ್ಕಳ ಸಂತೆ ಮತ್ತು ಮಕ್ಕಳ ಅಂಗಡಿ - ಎಸ್ಎಸ್ಎಲ್ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ ೫ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಸಂತೆಯಲ್ಲಿ ಗ್ರಾಮೀಣ ಪದಾರ್ಥಗಳ ಮಾರಾಟಕ್ಕೆ ಆದ್ಯತೆ ಇದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ.
ಮಕ್ಕಳ ಮಂಟಪ - ೧೦ ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ೬ ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯAಥ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದರ್ಶನ ನೀಡುವಂತಿಲ್ಲ,
ಛದ್ಮವೇಶ ಸ್ಪರ್ಧೆ - ಎಲ್ ಕೆ.ಜಿ. ಮತ್ತು ಯುಕೆಜಿ ವಿದ್ಯಾರ್ಥಿಗಳ ವಿಭಾಗ, ೧ ನೇ ತರಗತಿಯಿಂದ ೪ನೇ ತರಗತಿ, ೫ ರಿಂದ ೭ ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪರ್ಧೆಗಳು ನಡೆಯಲಿದ್ದು, ವಸ್ತಾçಲಂಕಾರಕ್ಕೆ ಆದ್ಯತೆಯಿದೆ.
ಕ್ಲೇ ಮಾಡೆಲಿಂಗ್ - ೫ ರಿಂದ ೭ನೇ ತರಗತಿ ಹಾಗೂ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸ್ಪರ್ಧಿಗಳು ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪರ್ಧೆಗಳು ಬೆಳಿಗ್ಗೆ ೯.೩೦ ಗಂಟೆಯಿAದ ಪ್ರಾರಂಭವಾಗುತ್ತದೆ. ಹೆಸರು ನೋಂದಾಯಿಸಲು- ಮಕ್ಕಳ ಸಂತೆ, - ದಿವ್ಯಾ ಚೇತನ್ ೯೫೩೮೧೦೧೮೬೩, ಚಂದ್ರಿಕಾರಾಜು - ೯೯೮೬೫೧೮೭೪೨, ಮಕ್ಕಳಿಂದ ಅಂಗಡಿ ಸ್ಪರ್ಧೆ - ಶಪಾಲಿ ರೈ - ೯೭೪೧೫೨೩೪೮೪, ರಶ್ಮಿ ಪ್ರವೀಣ್ - ೯೯೦೨೩೬೨೦೩೮, ಮಕ್ಕಳಿಂದ ಮಂಟಪ - ಸವಿತಾ ಅರುಣ್ - ೯೪೮೦೦೦೩೮೧೧, ಪ್ರೀತು ೮೨೭೭೦೫೦೩೬೬, ಛದ್ಮವೇಶ ಸ್ಪರ್ಧೆ - ನಮಿತಾ ರೈ ೯೪೪೮೯೭೬೪೦೫, ಶಮ್ಮಿ ಪ್ರಭು ೮೦೮೮೫೭೦೧೬ ಕ್ಲೇ ಮಾಡೆಲಿಂಗ್ - ಗಾನಾಪ್ರಶಾಂತ್ - ೯೪೪೯೭೧೩೭೪೮, ಪಲ್ಲವಿ ಪ್ರಸಾದ್ ೯೯೭೨೯೬೩೧೫೧ ಅವರುಗಳನ್ನು ಸಂಪರ್ಕಿಸಬಹುದಾಗಿದ್ದು, ಹೆಸರು ನೋಂದಾಯಿಸಲು ಸೆಪ್ಟೆಂಬರ್ ೨೮ ಕೊನೆ ಎಂದು ಮಾಹಿತಿ ನೀಡಿದ್ದಾರೆ.